ಬೆಂಗಳೂರು :ಹೊಸ ವರ್ಷಾಚರಣೆಯ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಗ್ಯಾಂಗ್ ವಾರ್...!!
Thursday, January 1, 2026

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಗ್ಯಾಂಗ್ ವಾರ್ ನಡೆದ ಘಟನೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ನಡೆದಿದೆ.
ನ್ಯೂ ಇಯರ್ ಪಾರ್ಟಿ ಮೂಡಿನಲ್ಲಿ ಯುವಕರು ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಜಗಳ ಬಿಡಿಸಿ ಎಲ್ಲರನ್ನು ಸ್ಥಳದಿಂದ ಕಳಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಯ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಶಿವಮೊಗ್ಗ ನಗರದ ಅಡಕೆ ಮಂಡಿ ಕ್ಲಬ್ ನಲ್ಲಿ ರಾತ್ರಿ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟವಾಗಿದೆ. ಚೇರ್ ಗಳಿಂದ ಎರಡು ಗುಂಪಿನವರು ಬಡಿದಾಡಿಕೊಂಡಿದ್ದಾರೆ. ತುಂಗಾನಗರ ಠಾಣೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಹೊಸ ವರ್ಷಾರಣೆ ಕಾರ್ಯಕ್ರಮವನ್ನು ಪೊಲೀಸರು ರದ್ದುಗೊಳಿಸಿದ್ದಾರೆ.