ಸ್ವಿಟ್ಜರ್‌ಲ್ಯಾಂಡ್‌: ಶೋಕವಾಗಿ ಮಾರ್ಪಟ್ಟ ಹೊಸ ವರ್ಷಾಚರಣೆ ! ; ಐಷಾರಾಮಿ ಬಾರ್‌ನಲ್ಲಿ ಭೀಕರ ಬೆಂಕಿ ಅವಘಡ, 40 ಮಂದಿ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ...!!"

ಸ್ವಿಟ್ಜರ್‌ಲ್ಯಾಂಡ್‌: ಶೋಕವಾಗಿ ಮಾರ್ಪಟ್ಟ ಹೊಸ ವರ್ಷಾಚರಣೆ ! ; ಐಷಾರಾಮಿ ಬಾರ್‌ನಲ್ಲಿ ಭೀಕರ ಬೆಂಕಿ ಅವಘಡ, 40 ಮಂದಿ ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ...!!"

ಬೆರ್ನ್: ಅವರೆಲ್ಲ ನ್ಯೂ ಇಯರ್ ಪಾರ್ಟಿಗಾಗಿ ಆ ರೆಸ್ಟೋರೆಂಟ್‌ನಲ್ಲಿ ಸೇರಿದ್ದರು. ಆ ಪ್ರಸಿದ್ಧ ರೆಸ್ಟೋರೆಂಟ್‌ ಹೊಸ ವರ್ಷಾಚರಣೆಗೆ ಭರದ ಸಿದ್ಧತೆ ಮಾಡಿದ್ದರು. ಜನರು ಕೂಡ ಕುಡಿತ, ಡ್ಯಾನ್ಸ್, ಮೋಜು ಮಸ್ತಿ ಮಾಡುತ್ತಾ ನ್ಯೂ ಇಯರ್ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಸಂಭವಿಸಿದ ಸ್ಫೋಟದಿಂದ ಹೊಸ ವರ್ಷಾಚರಣೆ ನಡೆಯುತ್ತಿದ್ದ ಆ ಜಾಗದಲ್ಲಿ ಶೋಕಾಚರಣೆ ನಡೆಯುವಂತೆ ಆಗಿದೆ.

ಹೌದು.. ಸ್ವಿಟ್ಜರ್ಲೆಂಡ್‌ನ ಸ್ವಿಸ್ ನಗರದ ಕ್ರಾನ್ಸ್-ಮೊಂಟಾನಾದಲ್ಲಿ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಬಾರ್‌ ಒಂದರಲ್ಲಿ ಭಾರೀ ಸ್ಫೋಟ ಸಂಭವಿಸಿ ಬಹುದೊಡ್ಡ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮನಮೋಹಕ ಸ್ವಿಸ್ ಆಲ್ಪ್ಸ್‌ನ ಹೃದಯಭಾಗದಲ್ಲಿರುವ ಕ್ರಾನ್ಸ್ ಮೊಂಟಾನಾ ಪಟ್ಟಣ, ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಗಾಲ್ಫ್‌ನಂತಹ ಚಟುವಟಿಕೆಗಳಿಂದ ಜಾಗತಿಕ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸ್ವಿಟ್ಜರ್‌ಲೆಂಡ್‌ನ ಜಿನೀವಾದ ಹೃದಯಭಾಗದಲ್ಲಿರುವ ಅತ್ಯಂತ ಹಳೆಯ ಐಷಾರಾಮಿ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಿಂಗಳುಗಳ ನಂತರ ಈ ಘಟನೆ ಸಂಭವಿಸಿದೆ.

1834ರಲ್ಲಿ ಆರಂಭವಾದ ಮತ್ತು ದೇಶದ ಹೆಗ್ಗುರುತೆಂದು ಪರಿಗಣಿಸಲಾದ ಪ್ರಸಿದ್ಧ ಫೋರ್ ಸೀಸನ್ಸ್ ಹೋಟೆಲ್ ಡೆಸ್ ಬರ್ಗ್ಯೂಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

'ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಕರ್ತರು ತಕ್ಷಣವೇ ಧಾವಿಸಿ ಹಲವಾರು ಸಂತ್ರಸ್ತರಿಗೆ ಸಹಾಯ ಮಾಡಿದರು. ಗಂಟೆಗಳ ನಂತರವೂ ಬಾರ್ ಹೊರಗೆ ಆಂಬ್ಯುಲೆನ್ಸ್‌ಗಳು ನಿಂತಿದ್ದವು ಹಾಗೂ ಬಾರ್​ನ ಕಿಟಕಿಗಳು ಒಡೆದಿರುವುದು ಕಾಣುತ್ತಿತ್ತು' ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Ads on article

Advertise in articles 1

advertising articles 2

Advertise under the article