ಹೈದರಾಬಾದ್:27 ವರ್ಷ 220 ಕೆಜಿ ತೂಕ: ದೇಹದ ಭಾರ ಹೊರಲಾಗದೇ ಬಳಲುತ್ತಿರುವ ಯುವಕ, ಚಿಕಿತ್ಸೆಯ ನೆರವಿಗಾಗಿ ಮನವಿ..!!

ಹೈದರಾಬಾದ್:27 ವರ್ಷ 220 ಕೆಜಿ ತೂಕ: ದೇಹದ ಭಾರ ಹೊರಲಾಗದೇ ಬಳಲುತ್ತಿರುವ ಯುವಕ, ಚಿಕಿತ್ಸೆಯ ನೆರವಿಗಾಗಿ ಮನವಿ..!!

SEEKING FOR HELP

ಹೈದರಾಬಾದ್​: ಅತನಿಗೆ 27 ವರ್ಷ. ದೇಹದ ತೂಕ 220 ಕೆಜಿ. ಮಲಗಲೂ, ಎದ್ದೇಳಲೂ ಆಗದೇ ಆತ ಅನುಭವಿಸುತ್ತಿರುವ ನೋವು ವರ್ಣನಾತೀತ. ವಯಸ್ಸಿಗೆ ಮೀರಿದ ತೂಕದಿಂದಾಗಿ ಕುಟುಂಬಕ್ಕೆ ಹೊರೆಯಾಗಿದ್ದಲ್ಲದೆ, ಓದಿನಿಂದಲೂ ದೂರವಾಗಿದ್ದಾನೆ. ಹಾಸಿಗೆಯಿಂದ ಇಳಿಯಲು ಸಹ ಕಷ್ಟಪಡುತ್ತಿರುವ ಆತ, ನರಕಯಾತನೆ ಅನುಭವಿಸುತ್ತಿದ್ದಾನೆ.

ತೆಲಂಗಾಣದ ಜನಗಮ್​ ಜಿಲ್ಲೆಯ ಎಲ್ಲಂಲ ಗ್ರಾಮದ ತಾಟಿ ವೆಂಕಟಯ್ಯ ಮತ್ತು ಸಿದ್ಧಿಬಾಲ ದಂಪತಿಯ ಪುತ್ರ ಸಾಯಿಕುಮಾರ್​ ಅಧಿಕ ಸಮಸ್ಯೆಯಿಂದ ನರಳುತ್ತಿರುವ ಯುವಕ. ಕಳೆದ ಕೆಲವು ವರ್ಷಗಳಿಂದ ಹಾಸಿಗೆಯೇ ಆತನ ಪ್ರಪಂಚವಾಗಿದೆ. ಎಲ್ಲರಂತೆ ಈತ ದುಡಿದು ಕುಟುಂಬವನ್ನು ಪೋಷಿಸಬೇಕಾದ ವಯಸ್ಸಿನಲ್ಲಿ ನಡೆದಾಡಲೂ ತ್ರಾಸು ಪಡುತ್ತಿದ್ದಾನೆ. ಈತನ ಸ್ಥಿತಿ ಹೇಗಿದೆ ಎಂದರೆ, ಹಾಸಿಗೆಯಿಂದ ಎದ್ದೇಳಲು ಇಬ್ಬರು - ಮೂವರ ಸಹಾಯ ಬೇಕು. ಮಗನ ಕಷ್ಟ ನೋಡಿ ತಾಯಿ ದಿನವೂ ಕಣ್ಣೀರು ಸುರಿಸುತ್ತಿದ್ದಾರೆ.

7 ವರ್ಷದ ಹಿಂದೆ ಸಮಸ್ಯೆ ಆರಂಭ: ಸಾಯಿಕುಮಾರ್​​ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಗ ಅಧಿಕ ಬೊಜ್ಜಿನ ಸಮಸ್ಯೆ ಆರಂಭವಾಗಿದೆ. ಹೇಗೋ ಇಂಟರ್ಮೀಡಿಯೇಟ್ ಮುಗಿಸಿದ ಆತ, ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ಸಹಜ ಎಂದು ಭಾವಿಸಿದ್ದಾನೆ. ಆದರೆ, ಅದು ಅತಿರೇಕವಾಗಿ ನಡೆದಾಡಲೂ ಸಾಧ್ಯವಾಗದಂತೆ ಆಗಿದೆ. ಈ ಮಧ್ಯೆ, ಆತನ ತಂದೆ ವೆಂಕಟಯ್ಯ ಪಾರ್ಶ್ವವಾಯುವಿಗೆ ತುತ್ತಾಗಿ ವಿಧಿವಶರಾದರು. ತಾಯಿಯೂ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಸಾಯಿಕುಮಾರ್ ಅವರ ದೇಹವು ಏಳು ವರ್ಷದಿಂದ ತೂಕ ಹೆಚ್ಚುತ್ತಲೇ ಸಾಗಿದೆ.

ಚಿಕಿತ್ಸೆಗಾಗಿ ತಿಂಗಳಿಗೆ ₹50 ಸಾವಿರ ಖರ್ಚು: ಸಾಯಿಕುಮಾರ್ ಒಂದು ವರ್ಷದ ಹಿಂದೆ 180 ಕೆಜಿ ತೂಕವಿದ್ದ. ಈಗ 220 ಕೆಜಿ ತಲುಪಿದ್ದಾನೆ. ಮನೆಯಲ್ಲಿ ಬಡತನಕ್ಕೇನೂ ಕೊರತೆ ಇಲ್ಲ. ಇಷ್ಟಾದರೂ ಕುಟುಂಬಸ್ಥರು ಆತನಿಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಫಲಿತಾಂಶ ಮಾತ್ರ ಶೂನ್ಯ. ಹೈದರಾಬಾದ್‌ನ ನಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದಾಗ, ಹಾರ್ಮೋನುಗಳ ಪರಿಣಾಮದಿಂದ ದೇಹದ ತೂಕ ಹೆಚ್ಚಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯಶ್ರೀ ಯೋಜನೆಯಡಿ ಈ ರೋಗದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವಿದೇಶಗಳಿಂದ ವಿಶೇಷ ಇಂಜೆಕ್ಷನ್​ ಮತ್ತು ಔಷಧಗಳನ್ನು ತರಿಸಬೇಕು. ಇದಕ್ಕೆ ತಿಂಗಳಿಗೆ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆರು ತಿಂಗಳ ಸಹಜ ಚಿಕಿತ್ಸೆಯ ನಂತರ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಆದರೆ, ಕುಟುಂಬವು ಅಷ್ಟು ದೊಡ್ಡ ಮೊತ್ತವನ್ನು ಭರಿಸುವಷ್ಟು ಶಕ್ತವಾಗಿಲ್ಲ. ಆತನ ಕಷ್ಟವನ್ನೂ ನೋಡಲಾಗದೇ ಕಣ್ಣೀರು ಸುರಿಸುವುದೇ ನಿತ್ಯ ಕೆಲಸವಾಗಿದೆ.

ಪಿಂಚಣಿ ಕೂಡ ಇಲ್ಲ: ಸಾಯಿಕುಮಾರ್‌ಗೆ ನಡೆಯಲು ಸಾಧ್ಯವಾಗದಿರುವ ಕಾರಣ ನಾನೇ ಎಲ್ಲದಕ್ಕೂ ನೆರವಾಗುತ್ತೇನೆ. ಪತಿಯ ಮರಣದ ನಂತರ ತನಗೆ ಪಿಂಚಣಿ ಕೂಡ ಸಿಗುತ್ತಿಲ್ಲ. ಇರುವ ಒಬ್ಬ ಪುತ್ರ ದೈತ್ಯಾಕಾರದಿಂದಾಗಿ ನಡೆಯಲೂ ಸಾಧ್ಯವಿಲ್ಲದಾಗಿದೆ. ಊರಿನ ಕೆಲ ಜನರು ತಮಗಾದ ಸಹಾಯ ಮಾಡುತ್ತಾರೆ. ನಮಗೆ ಬಂದ ಕಷ್ಟ ಅಷ್ಟಿಷ್ಟಲ್ಲ ಎಂದು ಸಾಯಿಕುಮಾರ್​ ಅವರ ತಾಯಿ ಕಣ್ಣೀರಾದರು.

"ಸಾಯಿಕುಮಾರ್ 10ನೇ ತರಗತಿಯವರೆಗೆ ಆರೋಗ್ಯವಾಗಿದ್ದ. ಕಾಲೇಜಿಗೆ ಹೋದ ನಂತರ ಎಲ್ಲರೂ ಆತನನ್ನು ದಪ್ಪಗಿದ್ದೀಯಾ ಎಂದು ಗೇಲಿ ಮಾಡಲು ಪ್ರಾರಂಭಿಸಿದರು. ನಂತರ, ಆತ ಎಷ್ಟೇ ಔಷಧಗಳನ್ನು ಬಳಸಿದರೂ ಏನೂ ಪ್ರಯೋಜನವಾಗಲಿಲ್ಲ. ಕಳೆದ ಮೂರು ವರ್ಷಗಳಿಂದ, ಆತ ವಿಪರೀತ ತೂಕದಿಂದಾಗಿ ಹಾಸಿಗೆಯಿಂದ ಎದ್ದೇಳಲು ಕಷ್ಟಪಡುತ್ತಿದ್ದಾನೆ. ಆತನ ಎಲ್ಲ ಕೆಲಸಗಳನ್ನು ನಾನೇ ಮಾಡುತ್ತಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ ಮತ್ತು ನನ್ನ ಮಗನನ್ನು ಉಳಿಸಿ ಎಂದು ತಾಯಿ ಸಿದ್ಧಿಬಾಲಾ ಅವರು ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article