ಕಾಸರಗೋಡು :ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ್ಯಂ ಪಾತ್ರಧಾರಿ ! ಪೆಟ್ಟು ತಿಂದು ಸ್ಥಳದಲ್ಲೇ ಕುಸಿದು ಬಿದ್ದ ಯುವಕ..!!

ಕಾಸರಗೋಡು :ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ್ಯಂ ಪಾತ್ರಧಾರಿ ! ಪೆಟ್ಟು ತಿಂದು ಸ್ಥಳದಲ್ಲೇ ಕುಸಿದು ಬಿದ್ದ ಯುವಕ..!!


ಕಾಸರಗೋಡು: ತೆಯ್ಯಂ ಪಾತ್ರಧಾರಿ ತನ್ನ ಕೈಯಲ್ಲಿದ್ದ ಮರದ ಗುರಾಣಿಯಿಂದ ಸ್ಥಳದಲ್ಲಿ ನೋಡಲು ಬಂದಿದ್ದ ಯುವಕನೊಬ್ಬನಿಗೆ ಹೊಡೆದಿದ್ದು ಆತ ಸ್ಥಳದಲ್ಲೇ ಕುಸಿದು ಬಿದ್ದ ಘಟನೆ ಕಾಸರಗೋಡಿನ ನೀಲೇಶ್ವರದಲ್ಲಿ ನಡೆದಿದೆ.

ಕಾಸರಗೋಡಿನ ನೀಲೇಶ್ವರದ ಪಳ್ಳಿಕ್ಕರದ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ತೆಯ್ಯಂ ಪಾತ್ರಧಾರಿ ತನ್ನ ಕೈಯಲ್ಲಿದ್ದ ಮರದ ಗುರಾಣಿಯಿಂದ ನಿಂತಿದ್ದ ಯುವಕನ ಮೇಲೆ ಕೋಪಗೊಂಡು ಹೊಡೆದಿದ್ದು ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ನೀಲೇಶ್ವರದ ರೈಲ್ವೇ ರಸ್ತೆ ಮೇಲ್ಸೇತುವೆ ಬಳಿಯ ಪಲ್ಲಿಕ್ಕರ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದಲ್ಲಿ ಪೂಮಾರುತನ್ ದೇವರ 'ವೆಲ್ಲಟ್ಟಂ' ಆಚರಣೆ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹೊಡೆದ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ತೆಯ್ಯಂ ಪಾತ್ರಧಾರಿ ಸಾಗುತ್ತಿದ್ದ ನಡೆಯಲ್ಲಿ ನಿಂತಿದ್ದ ವ್ಯಕ್ತಿಗೆ ತನ್ನ ಗುರಾಣಿಯಿಂದ ಏಕಾಏಕಿ ಬಡಿದಿದ್ದಾರೆ. ಸ್ಥಳೀಯರು ಕುಸಿದು ಬಿದ್ದ ಯುವಕನನ್ನು ಆರೈಕೆ ಮಾಡಿ, ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ.‌ ವೈದ್ಯರು ಪರೀಕ್ಷಿಸಿ ಯಾವುದೇ ಗಾಯವಾಗಿಲ್ಲ. ಅಪಾಯ ಉಂಟಾಗಿಲ್ಲ ಎಂದು ಹೇಳಿ ಹಿಂದಕ್ಕೆ ಕಳಿಸಿದ್ದಾರೆ. 

ವೆಲ್ಲಟ್ಟಂ ಸಂದರ್ಭದಲ್ಲಿ ತೈಯ್ಯಂ ಪಾತ್ರಧಾರಿ ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮರದ ಗುರಾಣಿ ಹಿಡಿದು ತಿರುಗಿಸುತ್ತಾ ಸಾಗುತ್ತದೆ. ಈ ವೇಳೆ, ಸೇರಿದ ಜನರು ಕೀಟಲೆ ಮಾಡುವ ರೀತಿ ವರ್ತಿಸುವುದು ವಾಡಿಕೆ. ದೇವಸ್ಥಾನಕ್ಕೆ ಸಂಬಂಧಪಟ್ಟವರೇ ತೈಯ್ಯಂ ಸುತ್ತ ಸೇರಿ ಈ ಪದ್ಧತಿ ಅನುಸರಿಸುತ್ತಾರೆ. ಈ ವೇಳೆ, ತೈಯ್ಯಂ ನೋಡಲು ಬಂದವರೂ ಗುಂಪಿನಲ್ಲಿ ಸೇರಿಕೊಳ್ಳುತ್ತಾರೆ. ತೈಯ್ಯಂ ನರ್ತಕ ಕೀಟಲೆ ಮಾಡುವ ಜನರನ್ನು ಅಟ್ಟಿಸುತ್ತ ಬಂದು ಹೊಡೆಯುತ್ತದೆ. ಇಲ್ಲಿ ಪ್ರೇಕ್ಷಕನೊಬ್ಬ ತೈಯ್ಯಂ ಕೈಗೆ ಸಿಕ್ಕಿ ಹೊಡೆತ ತಿಂದಿದ್ದಾನೆ. 

2019ರಲ್ಲಿ ಇದೇ ರೀತಿ ತೈಯ್ಯಂ ಪಾತ್ರಧಾರಿ ಹೊಡೆದಿದ್ದು ಹಲವರು ಗಾಯಗೊಂಡ ಘಟನೆ ನಡೆದು ವಿವಾದಕ್ಕೆ ಕಾರಣವಾಗಿತ್ತು. ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ಕೇಸು ದಾಖಲಿಸಿತ್ತು. ಆದರೆ ಯಾರು ಕೂಡ ಪೊಲೀಸ್ ದೂರು ನೀಡಿರಲಿಲ್ಲ. ಘಟನೆ ಬಗ್ಗೆ ದೇವಸ್ಥಾನ ಸಿಬ್ಬಂದಿ, ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

Ads on article

Advertise in articles 1

advertising articles 2

Advertise under the article