ಬೆಂಗಳೂರು :ಕೋಳಿಮೊಟ್ಟೆ ಸೇವನೆಯ ಬಗ್ಗೆ ಆತಂಕ ಬೇಡ; ಸಚಿವ ದಿನೇಶ ಗುಂಡೂರಾವ್
Tuesday, December 16, 2025

ವಿಧಾನ ಪರಿಷತ್ತು: ಕೋಳಿಮೊಟ್ಟೆ ಸೇವನೆಯ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳವಾರ ಮೇಲ್ಮನೆಯಲ್ಲಿ ಸದಸ್ಯ ರಮೇಶ ಬಾಬು ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಕೋಳಿ ಮೊಟ್ಟೆ ಸೇವನೆ ಕ್ಯಾನ್ಸರ್ ಗೆ ಕಾರಣವಾಗಲಿದೆ ಎಂಬ ವಿಷಯಕ್ಕೆ ಉತ್ತರಿಸಿದ ಸಚಿವರು, ಕಳೆದ ವರ್ಷ ನಾವು 124 ಮೊಟ್ಟೆಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಅದರಲ್ಲಿ 123 ಮೊಟ್ಟೆಗಳ ಫಲಿತಾಂಶ ಉತ್ತಮವಾಗಿದೆ. ಖಾಸಗಿ ಕಂಪನಿಯ ಮೊಟ್ಟೆಯನ್ನೂ ಲ್ಯಾಬ್ ಗೆ ಕಳಿಸಲಾಗಿದ್ದು, ಒಂದೆರಡು ದಿನಗಳಲ್ಲಿ ವರದಿ ಬರಲಿದೆ ಎಂದರು.
ಯೂಟ್ಯೂಬ್ ನಲ್ಲಿ ಮೊಟ್ಟೆಯ ಸುದ್ದಿಗೆ ಸಾರ್ವಜನಿಕರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕರ್ನಾಟಕದಲ್ಲಿನ ಕೋಳಿ ಮೊಟ್ಟೆಗಳು ಸತ್ವಯುತವಾಗಿವೆ ಎಂದು ಸ್ಪಷ್ಟಪಡಿಸಿದರು.