ಮುಂಬೈ :ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಟೆಕ್ಕಿಗೆ 2 ಕೋಟಿ ರೂ. ವಂಚನೆ..!

ಮುಂಬೈ :ಬಬಿತಾ ದಾಸ್ ಎಂಬ ಟೆಕ್ಕಿ 2 ಕೋಟಿ ರೂ ಹಣ ಕಳೆದುಕೊಂಡಿದ್ದು, ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಬಿತಾ ದಾಸ್ ಗೆ ಬ್ಲೂಡಾರ್ಟ್ ಕೊರಿಯರ್ ಹೆಸರಿನಲ್ಲಿ ಒಂದು ಕರೆ ಬಂದಿದೆ. ನಾವು ಮುಂಬೈ ಪೊಲೀಸರು ಎಂದು ಹೇಳಿಕೊಂಡು ಕರೆ ಮಾಡಿದ ಖದೀಮರು ನಿಮ್ಮ ಹೆಸರಿನ ಕೊರಿಯರ್ ನಲ್ಲಿ ಬ್ಯಾಗೇಜ್ ಸಿಕ್ಕಿದೆ. ಅದು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆ. ಸಿಕ್ಕಿದೆ. ನಾವು ಮುಂಬೈ ಪೊಲೀಸರು ನಿಮ್ಮನ್ನ ಡಿಜಿಟಲ್ ಅರೆಸ್ಟ್ ಮಾಡ್ತೀವಿ. ನಾವು ನಿಮ್ಮನ್ನು ವೆರಿಫೈ ಮಾಡುತ್ತೇವೆ. ನೀವು ಎಲ್ಲಿಗೂ ಹೋಗಬಾರದು ಎಂದು ಬೆದರಿಸಿದ್ದಾರೆ.
ಒಂದು ಆ್ಯಪ್ ಇನ್ ಸ್ಟಾಲ್ ಮಾಡಿಕೊಳ್ಳಿ ಎಂದು ಮಹಿಳೆಗೆ ಹೇಳಿದ ವಂಚಕರು ಮಹಿಳೆಯನ್ನ ಹೆದರಿಸಿ ಹಂತ ಹಂತವಾಗಿ 2 ಕೋಟಿ ಹಣ ಟ್ರಾನ್ಸ್ಪರ್ ಮಾಡಿಸಿಕೊಂಡಿದ್ದಾರೆ. ವಂಚಕರಿಗೆ ಕೊಡಲು ಹಣ ಇಲ್ಲದೇ ಮಹಿಳೆ ಸೈಟ್ ಮಾರಿ ಹಣ ಟ್ರಾನ್ಸ್ ಫರ್ ಮಾಡಿದ್ದಾರೆ.ಹಂತ ಹಂತವಾಗಿ 2 ಕೋಟಿ ಹಣವನ್ನ ಮಹಿಳೆ ನೀಡಿದ್ದಾರೆ.
ನಂತರ ಮೋಸ ಹೋಗಿರುವುದು ಗೊತ್ತಾಗಿ ಮಹಿಳೆ ಸೈಬರ್ ಕೈಮ್ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ