ಶಿವಮೊಗ್ಗ :ಡೈವೋರ್ಸ್ ಬಳಿಕ ಗಂಡನ ಗೆಳೆಯನನ್ನೇ ಮದ್ವೆಯಾದ ಪತ್ನಿ – ಮುಂದೇನಾಯ್ತು?
Sunday, December 28, 2025

ಶಿವಮೊಗ್ಗ : ವಿಚ್ಛೇದನ ಬಳಿಕ ಪತಿಯ ಗೆಳೆಯನನ್ನು ಮದುವೆಯಾಗಿದ್ದಕ್ಕೆ ರೊಚ್ಚಿಗೆದ್ದು ಸ್ನೇಹಿತನ ಮೇಲೆ ವಿಕ್ರಂ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಮಲಬಕೊಪ್ಪ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿಕ್ರಂ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಪತ್ನಿ ಛಾಯಾಗೆ ಆರೋಪಿ ವಿಕ್ರಂ ವಿಚ್ಛೇದನ ನೀಡಿದ್ದ.
ಹಲ್ಲೆಗೆ ಒಳಗಾದ ವಿನೋದ್ ಆರೋಪಿ ವಿಕ್ರಂ ಇಬ್ಬರು ಸ್ನೇಹಿತರು. ವಿಚ್ಛೇದನ ಬಳಿಕ ತನ್ನ ಪತ್ನಿಗೆ ಸ್ನೇಹಿತನೇ ಮದುವೆಯಾದ ಹಿನ್ನೆಲೆಯಲ್ಲಿ, ವಿಕ್ರಮ್ ಸಿಟ್ಟಿಗೆದ್ದು ವಿನೋದ್ ಮೇಲೆ ಆರೋಪಿ ವಿಕ್ರಂ ಹಲ್ಲೆ ಮಾಡಿದ್ದಾನೆ. ಲಾರಿ ಚಾಲಕ ವಿನೋದ್ ಮೇಲೆ ವಿಕ್ರಂ ಮಾರಣಾಂತಿಕವಾಗಿ ಹಲ್ಲೆಗೈದಿದ್ದಾನೆ. ಹಲ್ಲೆಗೆ ಒಳಗಾದಂತಹ ವಿನೋದ್ ಗೆ ಸದ್ಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವಿಕ್ರಂ ಗಾಗಿ ಪೊಲೀಸರು ಇದಿಗ ಹುಡುಕಾಟ ನಡೆಸುತ್ತಿದ್ದಾರೆ