ಆಂಧ್ರಪ್ರದೇಶ :ಆನ್ ಲೈನ್ ಗೇಮಿಂಗ್ಗೆ ವ್ಯಕ್ತಿ ಬಲಿ : ಸೆಲ್ಫಿ ವಿಡಿಯೋ ಮಾಡಿಟ್ಟು ಯುವಕ ಆತ್ಮ*ಹತ್ಯೆ..!!

ಆಂಧ್ರಪ್ರದೇಶ :ಇದು ಡಿಜಿಟಲ್ ಯುಗ. ಕ್ಷಣ ಕ್ಷಣವೂ ಮೊಬೈಲ್ ಬಿಟ್ಟು ಇರುವುದಿಲ್ಲ. ಅದರಲ್ಲೂ ಯುವ ಪೀಳಿಗೆ ಬೊಬೈಲ್ನಲ್ಲಿ ಹುಳುವಾಗಿಬಿಟ್ಟಿದ್ದಾರೆ. ಅಷ್ಟೊಂದು ಮೊಬೈಲ್ಗೆ ಅಡಿಕ್ಟ್ ಆಗಿದ್ದಾರೆ. ಡಿಜಿಟಲ್ ಯುಗ ಎಷ್ಟು ಒಳೆಯದೋ ಅಷ್ಟೇ ಮಾರಕವಾಗಿದೆ. ಆನ್ ಲೈನ್ ಗೇಮ್ಗಳಿಗೆ ದುಡಿದ ಹಣವನ್ನ ಹೂಡಿಕೆ ಮಾಡಿ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಬಳಿಕ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೆಡ್ಚಲ್ ಜಿಲ್ಲೆಯ ಸೂರಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ರವೀಂದರ್ ಎಂಬ ಯುವಕ ಕೆಲವು ಸಮಯದಿಂದ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದ. ಹಣ ಕಳೆದುಕೊಂಡಿದ್ದಾನೆ.
ಸೂರಾರಾಮ್ ಪೊಲೀಸರ ಪ್ರಕಾರ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸ್ಥಳೀಯ ನಿವಾಸಿ ರವೀಂದರ್ (24) ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣ ಗಳಿಸುವ ಉದ್ದೇಶದಿಂದ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿದ್ದ.
ದೊಡ್ಡ ಮೊತ್ತದ ಹಣಕ್ಕಾಗಿ ಹಲವು ಬಾರಿ ಮೋಸ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ತಕ್ಷಣ ಸ್ಥಳೀಯ ಮಲ್ಲಾರೆಡ್ಡಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ರವೀಂದರ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆನ್‌ಲೈನ್ ಆಟಗಳಿಗೆ ವ್ಯಸನಿಯಾಗಿ ನಂತರ ಮೋಸ ಹೋಗದಂತೆ ಸಾರ್ವಜನಿಕರಿಗೆ ಪೊಲೀಸರು ಸಲಹೆ ನೀಡಿದರು. ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ವಿವರಗಳು ಇನ್ನೂ ತಿಳಿದುಬಂದಿಲ್ಲ.