ಗುಜರಾತ್: ಪ್ರಸಿದ್ಧ ಶಕ್ತಿಪೀಠ ಪಾವಗಡದಲ್ಲಿ ಘೋರ ದುರಂತ!! ಇದ್ದಕ್ಕಿದ್ದಂತೆ ಕುಸಿದು ಬಿದ್ದ ಭಕ್ತರು ಮತ್ತು ಉದ್ಯೋಗಿಗಳನ್ನು ಕರೆದೊಯ್ಯುತ್ತಿದ್ದ ಸರಕು ಸಾಗಣೆ ರೋಪ್‌ವೇ!!. ಅಪಘಾತದಲ್ಲಿ ಆರು ಮಂದಿ ದುರಂತ ಅಂತ್ಯ!!.
ಮಧ್ಯಾಹ್ನ 3:30 ರ ಸುಮಾರಿಗೆ ರೋಪ್‌ವೇ ಬಿದ್ದಿದೆ. ಇಬ್ಬರು ಲಿಫ್ಟ್‌ಮೆನ್, ಇಬ್ಬರು ಉದ್ಯೋಗಿಗಳು ಮತ್ತು ಇತರ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಪ್ರಯಾಣಿಕರ ರೋಪ್‌ವೇ ಮುಚ್ಚಲಾಗಿದೆ. ಅದಾಗ್ಯೂ ದೇವಾಲಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಸರಕು ಸಾಗಣೆಗಾಗಿ ರೋಪ್‌ವೇ ಬಳಸಲಾಗುತ್ತಿದೆ.
ಮಹಾಕಾಳಿ ದೇವಿಯ ಪ್ರಸಿದ್ಧ ಶಕ್ತಿ ಪೀಠವು ಪಂಚಮಹಲ್ ಜಿಲ್ಲೆಯ ಪಾವಗಡ ಬೆಟ್ಟದ ಶಿಖರದ ಮೇಲಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಚಂಪಾನೇರ್‌ನ ಎದುರು ಇದೆ. ಹಿಂದೂ ಪುರಾಣದ ಪ್ರಕಾರ, ಇದು ಸತಿ ದೇವಿಯ ದೇಹದ ಭಾಗಗಳು ಬಿದ್ದ 51 ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯ ಹಿಂದೆ ಚಿಕ್ಕದಾಗಿದ್ದು, ಶಿಥಿಲಾವಸ್ಥೆಯಲ್ಲಿತ್ತು. 2022ರ ನಂತರ ಈ ಸ್ಥಳ ಮತ್ತಷ್ಟು ಅಭಿವೃದ್ಧಿಕಂಡು ಪ್ರಸಿದ್ಧಿ ಪಡೆದಿದೆ. ಕಳೆದ ವರ್ಷ ಗುಜರಾತ್ ಸರ್ಕಾರದ ರೋಪ್‌ವೇ ವಿಸ್ತರಣೆಗೆ ಅನುಮೋದನೆ ನೀಡಿದೆ.