ಬೆಂಗಳೂರು: Bigg Boss ಬಿಗ್ ಬಾಸ್ ಕನ್ನಡ ಸೀಸನ್ 12′ ಶೋಗೆ ಫೈನಲ್ ಆದ ಸ್ಪರ್ಧಿಗಳು ಇವರೇ ನೋಡಿ?

ಬೆಂಗಳೂರು: Bigg Boss ಬಿಗ್ ಬಾಸ್ ಕನ್ನಡ ಸೀಸನ್ 12′ ಶೋಗೆ ಫೈನಲ್ ಆದ ಸ್ಪರ್ಧಿಗಳು ಇವರೇ ನೋಡಿ?

ಬೆಂಗಳೂರು :‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರಂಭಕ್ಕೆ ಉಳಿದಿರೋದು ಇನ್ನು ಕೆಲವೇ ದಿನಗಳು ಮಾತ್ರ. ಕಿಚ್ಚ ಸುದೀಪ್ ಅವರು ಈ ಬಾರಿಯ ಬಿಗ್ ಬಾಸ್ ನಡೆಸಿಕೊಡಲು ರೆಡಿ ಆಗುತ್ತಿದ್ದಾರೆ. ಈ ಶೋ ಆರಂಭಕ್ಕೂ ಮೊದಲು ಅವರು ‘ಮಾರ್ಕ್’ ಚಿತ್ರದ ಕೆಲಸ ಪೂರ್ಣಗೊಳಿಸಬೇಕು ಎನ್ನುವ ಟಾರ್ಗೆಟ್ ಹೊಂದಿದ್ದಾರೆ.

ಹೀಗಿರುವಾಗಲೇ 18 ಸ್ಪರ್ಧಿಗಳು ಫೈನಲ್ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಕೆಲವು ಹೆಸರು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

12ನೇ ಸೀಸನ್ ಆರಂಭಕ್ಕೂ ಮೊದಲು ಸ್ಪರ್ಧಿಗಳ ಹೆಸರುಗಳು ಹರಿದಾಡಿವೆ. 18 ಜನರ ಹೆಸರು ಲಿಸ್ಟ್ನಲ್ಲಿ ಇದೆ. ಇದರಲ್ಲಿ ಕನಿಷ್ಠ 10 ಮಂದಿಯಾದರೂ ಬರಬಹುದು ಎಂಬುದು ಕೆಲವರ ಲೆಕ್ಕಾಚಾರ.

ಧಾರಾವಾಹಿಗಳಲ್ಲಿ ನಟಿಸಿರೋ ಸಾಗರ್ ಬಿಲ್ಲಿಗೌಡ ಹೆಸರು ಪಟ್ಟಿಯಲ್ಲಿ ಇದೆ. ಇನ್ನು, ನಟಿ ಶ್ವೇತಾ ಪ್ರಸಾದ್, ಸಂಜನಾ ಬುರ್ಲಿ ಹೆಸರು ಕೂಡ ಓಡಾಡಿದೆ. ವಿವಾದಗಳ ಮೂಲಕ ಸುದ್ದಿ ಆದ ಸುದ್ದಿ ನಿರೂಪಕಿ ದಿವ್ಯಾ ವಸಂತ್ ಕೂಡ ಲಿಸ್ಟ್ನಲ್ಲಿ ಇದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದ ಸ್ಯಾಮ್ ಸಮೀರ್ ಹೆಸರು ಹರಿದಾಡಿದೆ. ಡಾಕ್ಟರ್ ಬ್ರೋ ಅಂತನೇ ಫೇಮಸ್ ಆದ ಗಗನ್ ಶ್ರೀನಿವಾಸ್ ಕೂಡ ಬರುತ್ತಾರೆ ಎನ್ನಲಾಗುತ್ತಿದೆ. ಆದರೆ, ಇದು ಎಷ್ಟು ನಿಜ ಎಂಬುದು ಶೋ ಆರಂಭ ಆದ ಬಳಿಕವೇ ತಿಳಿಯಲಿದೆ.
ಮೇಘಾ ಶೆಟ್ಟಿ ಅವರು ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಅವರು ಕೂಡ ಶೋನಲ್ಲಿ ಇರುತ್ತಾರಂತೆ. ಸಂಖ್ಯಾಶಾಸ್ತ್ರಜ್ಞ ಅರವಿಂದ ರತನ್, ಯೂಟ್ಯೂಬ್ ಸೆನ್ಶೇಶನ್ ಪಾಯಲ್ ಚೆಂಗಪ್ಪ ಹೆಸರು ಕೂಡ ಲಿಸ್ಟ್ನಲ್ಲಿ ಇದೆ. ವರುಣ್ ಆರಾಧ್ಯಾ ಕೂಡ ಈ ಬಾರಿ ಬಿಗ್ ಬಾಸ್ಗೆ ಬರ್ತಾರಂತೆ.

ಸೀರಿಯಲ್ ನಟ ವಿಜಯ್ ಸೂರ್ಯ ಕೂಡ ಬಿಗ್ ಬಾಸ್ನಲ್ಲಿದ್ದಾರಂತೆ. ಧಾರಾವಾಹಿಗಳಲ್ಲಿ ನಟಿಸುತ್ತಿರುವ ದೀಪಿಕಾ ಗೌಡ ಕೂಡ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ. ಅಮೃತಾ ರಾಮಮೂರ್ತಿ, ಸಿಂಗರ್ ಸುನೀಲ್, ಬಾಳು ಬೆಳಗುಂದಿ, ಧನುಶ್, ಸ್ವಾತಿ ಹೆಸರು ಕೂಡ ಪಟ್ಟಿಯಲ್ಲಿ ಇದೆ

Ads on article

Advertise in articles 1

advertising articles 2

Advertise under the article