ರಾಜಸ್ಥಾನ :ಪ್ರಿಯಕರನಿಗೆ ಮಗು ಇಷ್ಟವಿಲ್ಲವೆಂದು 3 ವರ್ಷದ ಮಗುವನ್ನು ಕೊಂದ ತಾಯಿ..!!

ರಾಜಸ್ಥಾನ :ಪ್ರಿಯಕರನಿಗೆ ಮಗು ಇಷ್ಟವಿಲ್ಲವೆಂದು 3 ವರ್ಷದ ಮಗುವನ್ನು ಕೊಂದ ತಾಯಿ..!!

ಅಜ್ಮೀರ್: ಅಕ್ರಮ ಸಂಬಂಧದಲ್ಲಿದ್ದ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗಳನ್ನು ಸರೋವರಕ್ಕೆ ಎಸೆದು ಕೊಂದಿರುವ ಘಟನೆ ರಾಜಸ್ಥಾನದ ಅಜ್ಮಿರ್ ನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಶುಕ್ಲಾಪುರ ನಿವಾಸಿ ಅಂಜಲಿ ಸಿಂಗ್ ಅಲಿಯಾಸ್ ಪ್ರಿಯಾ ಎನ್ನಲಾಗಿದೆ.
ಏನಿದು ಪ್ರಕರಣ:
ಉತ್ತರ ಪ್ರದೇಶದ ಮೂಲದವಳಾದ ಅಂಜಲಿ ಈ ಹಿಂದೆ ಓರ್ವನನ್ನು ಮದುವೆಯಾಗಿದ್ದು ಇವರಿಗೆ ಮೂರೂ ವರ್ಷದ ಹೆಣ್ಣು ಮಗಳಿದ್ದಾಳೆ ಈ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿ ಬೇರ್ಪಟ್ಟಿದ್ದಾರೆ. ಇದಾದ ಬಳಿಕ ಅಂಜಲಿ ರಾಜಸ್ಥಾನದ ಅಜ್ಮೀರ್‌ನಲ್ಲಿರುವ ಗೆಳೆಯ ಅಖಿಲೇಶ್ ಜೊತೆಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಳು ಆದರೆ ಅಖಿಲೇಶ್ ಗೆ ಮಗುವನ್ನು ತನ್ನ ಜೊತೆ ಇರಿಸಿಕೊಳ್ಳುವುದು ಇಷ್ಟವಿರಲಿಲ್ಲ ಈ ವಿಚಾರವನ್ನು ಅಂಜಲಿ ಬಳಿ ಅಖಿಲೇಶ್ ಹೇಳಿಕೊಂಡಿದ್ದನಂತೆ.

ಇನ್ನು ನಮ್ಮ ಇಬ್ಬರ ಪ್ರೀತಿಗೆ ನಮ್ಮ ಮಗು ತಡೆಯಾಗುವುದು ಬೇಡ ಎಂದು ನಿರ್ಧರಿಸಿದ ತಾಯಿ ಮಗುವನ್ನು ಸರೋವರಕ್ಕೆ ಎಸೆದಿದ್ದಾಳೆ.
ಮಗು ನಾಪತ್ತೆ ನಾಟಕ:
ಇತ್ತ ತಡರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುವುದನ್ನು ಕಂಡು ವಿಚಾರಿಸಿದ್ದಾರೆ .
ಬಳಿಕ ಸರೋವರದ ಬಳಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದು, ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article