
ಮಂಗಳೂರು: ಮನೆಯವರೇ ನನ್ನನ್ನು ಅರ್ಥ ಮಾಡಿಕೊಂಡಿಲ್ಲ.. ಬೇರೆಯವರಿಂದ ಸಾಧ್ಯವೇ? ಎಂದು ಸ್ಟೇಟಸ್ ಹಾಕಿ, ಆರನೇ ಮಹಡಿಯಿಂದ 9ನೇ ಕ್ಲಾಸ್ ವಿದ್ಯಾರ್ಥಿನಿ ದುರಂತ ಸಾವು..!!!

ಮಂಗಳೂರು, ಸೆ.9 : ನಗರದ ಬಜಿಲಕೇರಿ ದೇವಸ್ಥಾನ ಸಮೀಪ ಅಪಾರ್ಟ್ಮೆಂಟ್ ಕಟ್ಟಡದ ಆರನೇ ಮಹಡಿಯಿಂದ ಹಾರಿ ಎಂಟನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಹುಡುಗಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಮೃತಪಟ್ಟಿದ್ದಾಳೆ.
ಮೂಲತಃ ಉತ್ತರ ಪ್ರದೇಶ ಬನಾರಸ್ ಜಿಲ್ಲೆಯ, ಪ್ರಸ್ತುತ ಬಜಿಲಕೇರಿಯಲ್ಲಿ ನೆಲೆಸಿರುವ ದಂಪತಿಯ ಪುತ್ರಿ, ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಒಂಭತ್ತನೇ ಕ್ಲಾಸ್ ಓದುತ್ತಿದ್ದ ವಿದ್ಯಾರ್ಥಿನಿ ಖುಷಿ (14) ಆತ್ಮಹತ್ಯೆ ಮಾಡಿಕೊಂಡವಳು.
ಸೆ.7ರಂದು ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ಬಂದಿದ್ದ ಖುಷಿ ತನ್ನ ಸಹೋದರಿ ಮತ್ತು ಸ್ನೇಹಿತೆ ಜತೆಗೆ ಅಪಾರ್ಟ್‌ಮೆಂಟ್ ಟೇರೆಸ್ ಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಅವರ ಜತೆ ಮಾತನಾಡುತ್ತಿದ್ದಾಗಲೇ ಟೆರೇಸ್‌ನಿಂದ ಹಾರಿದ್ದಾಳೆ. ಪ್ರತಿಭಾನ್ವಿತೆ ವಿದ್ಯಾರ್ಥಿನಿಯಾಗಿದ್ದು ರೀಲ್ಸ್ ಮಾಡಿ ಜಾಲತಾಣದಲ್ಲಿ ಹರಿಯಬಿಡುವ ಹವ್ಯಾಸ ಇತ್ತು. ಇದರ ಬಗ್ಗೆ ಮನೆಯಲ್ಲಿ ವಿರೋಧ ಇತ್ತೆನ್ನಲಾಗಿದೆ. ನನ್ನ ಮನೆಯವರೇ ನನ್ನನ್ನು ಅರ್ಥ ಮಾಡಿಕೊಳ್ಳಲ್ಲ, ಬೇರೆವರಿಂದ ಸಾಧ್ಯವೇ ಎಂದು ಆಕೆ ಸಾವಿಗೂ ಮುನ್ನ ಮೊಬೈಲ್ ನಲ್ಲಿ ಸ್ಟೇಟಸ್ ಹಾಕ್ಕೊಂಡಿದ್ದಳು ಎನ್ನುವ ಮಾಹಿತಿ ಇದೆ. ಖುಷಿ ಪೋಷಕರಿಗೆ ಒಟ್ಟು 4 ಮಂದಿ ಮಕ್ಕಳಲ್ಲಿ ಈಕೆ 2ನೇಯವಳು. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.