
ಹುಬ್ಬಳ್ಳಿ :ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು ; ನಿಮ್ಮ ಧರ್ಮದಂತೆ ಮರಭೂಮಿಯಲ್ಲಿ ಹುಟ್ಟಿ ಬರಡು ಭೂಮಿಯಲ್ಲಿ ಹುಟ್ಟಿರೋ ಧರ್ಮವಲ್ಲ, ನಿಮ್ಮ ಧರ್ಮದಲ್ಲಿ ಮಹಿಳೆಯರು ಬೋಗದ ವಸ್ತು !

ಹುಬ್ಬಳ್ಳಿ, ಆ 29 : ಸರ್ಕಾರ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದೆ. ಸಾಹಿತ್ಯದಲ್ಲಿ ಬೂಕರ್ ಅವಾರ್ಡ್ ಬಂದಿದೆ. ಅದಕ್ಕೆ ನಮಗೂ ಗೌರವ ಇದೆ. ಭಕ್ತಿ ಭಾವದಿಂದ ಪೂಜೆ ಮೂಲಕ ಆರಂಭವಾಗೋ ದಸರಾ ಉದ್ಘಾಟನೆಗೆ ಅವರನ್ನೇ ಕರೆಸಬೇಕಾದ ಅಗತ್ಯವಿತ್ತಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಈದ್ಗಾ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರನ್ನು ಅಧಿಕಾರದಿಂದ ದೂರ ಇಡಲು ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಸಿದ್ದರಾಮಯ್ಯ ಕರೆಸುತ್ತಿದ್ದಾರೆ. ಬಾನು ಮುಷ್ತಾಕ್ ಅವರೇ ನಿಮ್ಮ ಮನಸಾದರೂ ಇದಕ್ಕೆ ಹೇಗೆ ಒಪ್ಪಿತು..? ಕಾವೇರಿ ನೀರನ್ನು ನಾವು ಪೂಜಿಸುತ್ತೇವೆ. ಆ ನೀರು ನಿಮ್ಮ ಗಂಟಲಲ್ಲಿ ಇಳಿಯಲ್ವಾ..? ದೇವತೆಯಂತೆ ಪೂಜಿಸೋ ನದಿಗಳ ನೀರನ್ನು ಕುಡಿಯಲ್ವಾ..? ಅದನ್ನು ನೀವು ದೇವಿ ರೂಪದಲ್ಲಿ ಮಾಡಿದ್ದೀರಿ ಅಂತ ಹೇಳ್ತೀರಾ..? ಚಾಮುಂಡಿ ದೇವಿಯೇ ನನ್ನನ್ನು ಕರೆಸುತ್ತಿದ್ದಾಳೆ ಅಂತ ಹೇಳ್ತೀರಿ. ನಿಮ್ಮ ಅಲ್ಲಾನೇ ನಿಮ್ಮನ್ನು ಮಸೀದಿಗೆ ಬಿಟ್ಟಿಲ್ಲ. ನಮ್ಮ ಚಾಮುಂಡಿ ನಿಮ್ಮನ್ನು ಕರೆಸಿಕೊಳ್ತಾಳಾ..? ಇಫ್ತಾರ್ ಕೂಟಕ್ಕೆ ಹೋಗೋ ಹಿಂದೂಗಳಿಗೆ ಮೊದಲು ಟೋಪಿ ಹಾಕ್ತಿರಿ. ಮಂಡೆ ಊರಿ ಕೂರಿಸ್ತೀರಿ, ನಮ್ಮ ದಸರಾಗೆ ಬರೋ ಮೊದಲು ಸೀರೆ ಉಟ್ಟು ಮಲ್ಲಿಗೆ ಮುಡಿದು ಬನ್ನಿ ಮೇಡಂ ಆವಾಗ ನಾವು ನಿಮ್ಮನ್ನು ಒಪ್ಪುತ್ತೇವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ವಿವಿಧತೆಯಲ್ಲಿ ಏಕತೆ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ:
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು. ನಿಮ್ಮ ಧರ್ಮದಂತೆ ಮರಭೂಮಿಯಲ್ಲಿ ಹುಟ್ಟಿ ಬರಡು ಭೂಮಿಯಲ್ಲಿ ಹುಟ್ಟಿರೋ ಧರ್ಮವಲ್ಲ. ನಿಮ್ಮ ಮನಸ್ಸಾದರೂ ಹೇಗೆ ಒಪ್ಪುತ್ತೆ, ನಾವು ಹೇಗೆ ನಿಮ್ಮನ್ನು ಒಪ್ಪಿಕೊಳ್ಳೋಣ ಹೇಳಿ. ಡಿ ಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಎಲ್ಲರಿಗೂ ಸೇರಿದ್ದು ಅಂತಿದ್ದಾರೆ. ಆ ಮೂಲಕ ಎಲ್ಲರನ್ನು ಹೆದರಿಸೋ ಕೆಲಸ ಮಾಡುತ್ತಿದ್ದಾರೆ. ಆದರೆ, ನಿಮ್ಮ ಹೆದರಿಕೆಗೆ ನಾವು ಬಗ್ಗಲ್ಲ. ವಿವಿಧತೆಯಲ್ಲಿ ಏಕತೆ ಇರೋದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರ. ಮುಸ್ಲಿಂ, ಕ್ರಿಶ್ಚಿಯನ್ ಧರ್ಮದಲ್ಲಿ ಇಲ್ಲ. ದೇವರನ್ನು ದೇವಿಯಂತೆ ಕಾಣ್ತೇವೆ. ನಿಮ್ಮ ಧರ್ಮದಲ್ಲಿ ಮಹಿಳೆಯರನ್ನು ಬೋಗದ ವಸ್ತು ಅಂತ ಕಾಣುತ್ತಾರೆ. ನಮ್ಮ ಸಂಸ್ಕೃತಿ ಬಗ್ಗೆ ನೀವು ಅಸಡ್ಡೆಯಾಗಿ ಮಾತಾಡ್ತಿದ್ದೀರಲ್ಲ. ಸುನ್ನಿ ಮಾಡಿಸಿಕೊಳ್ಳದೇ ನಮ್ಮನ್ನು ಮೆಕ್ಕಾಕೆ ಬಿಡ್ತೀರಾ..? ಹಾಗಾದರೆ ನೀವು ಹೇಗೆ ನಮ್ಮ ದಸರಾ ಉದ್ಘಾಟನೆಗೆ ಬರ್ತೀರಿ ಎಂದು ಮಾಜಿ ಸಂಸದರು ಪ್ರಶ್ನಿಸಿದರು.