
ಬೆಂಗಳೂರು :ದೇವರಿಗೆ ಧರ್ಮವಿಲ್ಲ, ಕ್ರಿಶ್ಚಿಯನ್ನರ ಚರ್ಚ್, ಮುಸ್ಲಿಮರ ಮಸೀದಿಗೆ ನಮ್ಮನ್ನು ಬಿಡಲ್ವಾ ? ಬ್ಯಾರಿಗಳು ನಮಗಿಂತ ಕನ್ನಡ ಚೆನ್ನಾಗಿ ಮಾತಾಡ್ತಾರೆ, ಅವರನ್ನ ತಳ್ಳುವುದಕ್ಕೆ ಆಗುತ್ತದೆಯೇ?

ಸದಾಶಿವನಗರ ನಿವಾಸದಲ್ಲಿಂದು ಮಾತನಾಡಿದ ಅವರು, "ಚಾಮುಂಡಿಯನ್ನು ನಾಡದೇವತೆ ಅಂತ ಕರೆಯುತ್ತೇವೆ. ರಾಜವಂಶಸ್ಥರು, ಸರ್ಕಾರ ಇಬ್ಬರೂ ಕರೆಯೋದು ಹಾಗೆ. ಇದು ಸರ್ಕಾರದ ಆಸ್ತಿ. ಎಲ್ಲೂ ಹಿಂದೂ ಧರ್ಮದ್ದು ಅಂತ ಹೇಳಿಲ್ಲ. ಹಿಂದೂಗಳು ಮಾತ್ರ ಬರಬೇಕು ಅಂತ ಇಲ್ಲ. ಎಲ್ಲಾ ಧರ್ಮದವರನ್ನೂ ಆಶೀರ್ವದಿಸುವ ದೇವತೆ. ನಾಡಹಬ್ಬಕ್ಕೆ ವಿದೇಶಿಗರೂ ಬರ್ತಾರೆ. ಬೇರೆ ಧರ್ಮದವರೂ ಬರ್ತಾರೆ" ಎಂದರು.
"ಮಹಾರಾಜರು ವಿದೇಶಿಯರನ್ನು ಆಹ್ವಾನಿಸುತ್ತಿದ್ರು. ಅವರೆಲ್ಲ ಯಾವ ಸಮುದಾಯಕ್ಕೆ ಸೇರಿದವರು?. ಬಾನು ಮುಷ್ತಾಕ್ ಬೆಟ್ಟ ಹತ್ತಬಾರದು ಅಂದ್ರೆ ಹೇಗೆ?. ನೀರು, ಸೂರ್ಯ, ದೇವರಿಗೆ ಧರ್ಮವಿಲ್ಲ. ಕ್ರಿಶ್ಚಿಯನ್ನರ ಚರ್ಚ್, ಮುಸ್ಲಿಮರ ಮಸೀದಿಗೆ ನಮ್ಮನ್ನು ಬಿಡಲ್ವೇ?. ಗೊಮ್ಮಟಗಿರಿಗೆ ನಮ್ಮನ್ನು ಬಿಡುವುದಿಲ್ವೇ?. ಅವರು ನಮ್ಮನ್ನು ಬರಬಾರದು ಅಂತ ಹೇಳ್ತಾರಾ" ಎಂದು ಪ್ರಶ್ನಿಸಿದರು.
ಯದುವೀರ್ ಇತಿಹಾಸ ಮರೆತಿದ್ದಾರೆ-ಡಿಕೆಶಿ:
"ಯದುವೀರ್ ಬಿಜೆಪಿ ಸೇರಿದ್ದಾರೆ. ಅವರು ಇತಿಹಾಸವನ್ನು ಮರೆತಿದ್ದಾರೆ. ನಾವು ಗೃಹಲಕ್ಷ್ಮಿ ಹಣ ಚಾಮುಂಡಿ ಮುಂದಿಟ್ಟು ಪೂಜಿಸಿದ್ವಿ. ಎಲ್ಲಾ ಧರ್ಮದವರಿಗೆ ಗ್ಯಾರಂಟಿ ಕೊಡ್ತಿದ್ದೇವೆ. ಹೀಗಾಗಿ ಜಾತಿ ಧರ್ಮದ ಬಣ್ಣ ಕಟ್ಟಬಾರದು" ಎಂದು ತಿಳಿಸಿದರು.
ಬಿಜೆಪಿಗಿಂತ ನಾವು ಹೆಚ್ಚು ಹಿಂದುತ್ವದವರು:
"ಬ್ಯಾರಿಗಳು ನಮಗಿಂತ ಕನ್ನಡ ಚೆನ್ನಾಗಿ ಮಾತಾಡ್ತಾರೆ. ಅವರನ್ನು ತಳ್ಳುವುದಕ್ಕೆ ಆಗುತ್ತಾ?. ನಮ್ಮನ್ನು ನೀವು ಬರಬೇಡಿ ಅಂತಾರಾ?. ಬಿಜೆಪಿಗಿಂತ ನಾವು ಹೆಚ್ಚು ಹಿಂದುತ್ವದವರು. ದೇಶದಲ್ಲಿ ಇರೋರನ್ನು ಓಡಿಸೋಕೆ ಆಗುತ್ತಾ" ಎಂದು ಕೇಳಿದರು.