ಚಿಂತಾಮಣಿ: ಆಫ್ರಿಕನ್ ಹಂದಿ ಜ್ವರ ಪತ್ತೆ ; 100 ಹಂದಿಗಳು ಸಾವು, 57 ಹಂದಿಗಳನ್ನ ಕೊಲ್ಲಲು ನಿರ್ಧಾರ, ಜನರಿಗೆ ಆತಂಕ ಬೇಡವೆಂದ ಇಲಾಖೆAfrican pig fever case

ಚಿಂತಾಮಣಿ: ಆಫ್ರಿಕನ್ ಹಂದಿ ಜ್ವರ ಪತ್ತೆ ; 100 ಹಂದಿಗಳು ಸಾವು, 57 ಹಂದಿಗಳನ್ನ ಕೊಲ್ಲಲು ನಿರ್ಧಾರ, ಜನರಿಗೆ ಆತಂಕ ಬೇಡವೆಂದ ಇಲಾಖೆAfrican pig fever case


ಚಿಕ್ಕಬಳ್ಳಾಪುರ, ಆ 29 : ಚಿಂತಾಮಣಿ ಹೆಬ್ಬರಿ ಗ್ರಾಮದಲ್ಲಿರುವ ಫಾರ್ಮ್ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿರುವುದು ದೃಢಪಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ 57 ಹಂದಿಗಳನ್ನು ಸಾಯಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಹಂದಿ ಫಾರ್ಮ್​ನಲ್ಲಿ ಆಗಸ್ಟ್​ 19ರಿಂದ ಇಲ್ಲಿಯವರೆಗೂ 100 ಹಂದಿಗಳು ಸಾವನ್ನಪ್ಪಿವೆ. ಇದರಿಂದ ಎಚ್ಚೆತ್ತ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು. ಹಂದಿಗಳ ರಕ್ತದ ಸ್ಯಾಂಪಲ್ ಭೋಪಾಲ್​ನ ರಾಷ್ಟ್ರೀಯ ಲ್ಯಾಬ್​ಗೆ ಕಳುಹಿಸಲಾಗಿತ್ತು. ಲ್ಯಾಬ್​ ವರದಿಯಲ್ಲಿ ಆಫ್ರಿಕನ್​ ಹಂದಿ ಜ್ವರ ದೃಢಪಟ್ಟಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಫಾರಂನಲ್ಲಿರುವ 57 ಹಂದಿಗಳನ್ನು ಸಾಯಿಸಲು ನಿರ್ಧರಿಸಲಾಗಿದೆ.

ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರಂಗಪ್ಪ ಪ್ರತಿಕ್ರಿಯಿಸಿ, "ಕಳೆದೊಂದು ವಾರದಿಂದ ಫಾರ್ಮ್​ನಲ್ಲಿ ಹಂದಿಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಹಂದಿ ಜ್ವರ ದೃಢಪಟ್ಟ ಕಾರಣ ಸದ್ಯ ಫಾರ್ಮ್​ನಿಂದ ಹಂದಿಗಳ ಸಾಗಟವನ್ನು ನಿಷೇಧಿಸಲಾಗಿದೆ. ಆಫ್ರಿಕನ್ ಹಂದಿ ಜ್ವರ ಸಾಂಕ್ರಾಮಿಕ ರೋಗ. ದೇಶೀಯ ಮತ್ತು ಕಾಡು ಹಂದಿಗಳಿಗೆ ಈ ರೋಗ ಹರಡುತ್ತದೆ. ರೋಗಕ್ಕೆ ತುತ್ತಾದ ಹಂದಿಗಳು ಸಾವನ್ನಪ್ಪುತ್ತವೆ. ಈ ಜ್ವರಕ್ಕೆ ನಿರ್ದಿಷ್ಟ ಔಷಧಿ ಮತ್ತು ಚಿಕಿತ್ಸೆ ಇಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜ್ವರ ದೃಢಪಟ್ಟ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಹಂದಿಗಳನ್ನು ಕೊಲ್ಲಲಾಗುತ್ತದೆ. ಸೋಂಕಿತ ಹಂದಿಗಳಿಂದ ಮನುಷ್ಯನಿಗೆ ರೋಗ ಹರಡುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ" ಎಂದು ತಿಳಿಸಿದರು.

Ads on article

Advertise in articles 1

advertising articles 2

Advertise under the article