ಧರ್ಮಸ್ಥಳ :6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ.!

ಧರ್ಮಸ್ಥಳ :6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆ.!

ಧರ್ಮಸ್ಥಳ : ಧರ್ಮಸ್ಥಳ ಕೇಸ್’ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ.

6ನೇ ಪಾಯಿಂಟ್​ ಈ ಕಾರ್ಯಾಚರಣೆಯನ್ನು ಹಿಟಾಚಿ ಯಂತ್ರದ ಮೂಲಕ ನಡೆಸಲಾಗಿದ್ದು, ಎಸ್‌ಐಟಿ ಮೂಲಗಳಿಂದ ಈ ಮಾಹಿತಿಯನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಗುಂಡಿಯಲ್ಲಿ ಅಸ್ತಪಂಜರದ ಅವಶೇಷಗಳು ಪತ್ತೆಯಾಗಿದ್ದು, 2 ಎಲುಬುಗಳು ಸಿಕ್ಕ ಬಗ್ಗೆ ಎಸ್ ಐ ಟಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೆಚ್ಚಿನ ಆಳ ತೆಗೆಯಲು ಮುಂದಾಗಿದ್ದಾರೆ.

ಹಾಗೂ ಅಕ್ಕ ಪಕ್ಕದ ಜಾಗದಲ್ಲಿ ಕೂಡ ಅಗೆಯಲು ಎಸ್ ಐ ಟಿ (SIT) ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ .ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ಆದರೆ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ.

ಸ್ಥಳದಲ್ಲಿ ಹಾಜರಿರುವ ವಿಧಿವಿಜ್ಞಾನ ತಂಡವು ಹೆಚ್ಚಿನ ಪರೀಕ್ಷೆಗಾಗಿ ಅವಶೇಷಗಳನ್ನು ಪಡೆದುಕೊಂಡಿದೆ.

 

Ads on article

Advertise in articles 1

advertising articles 2

Advertise under the article