ಹರಿಯಾಣ :ಕೊಳವೆ ಬಾವಿಯಲ್ಲಿ ವಿಷಕಾರಿ ಅನಿಲ ಸೋರಿಕೆ ; ಕಾಲು ಜಾರಿ ಬಿದ್ದ ವ್ಯಕ್ತಿ ರಕ್ಷಿಸಲು ಹೋದ ಇಬ್ಬರು ಸೇರಿ ಮೂವರು ಸಾವು..!!!

ಹರಿಯಾಣ :ಕೊಳವೆ ಬಾವಿಯಲ್ಲಿ ವಿಷಕಾರಿ ಅನಿಲ ಸೋರಿಕೆ ; ಕಾಲು ಜಾರಿ ಬಿದ್ದ ವ್ಯಕ್ತಿ ರಕ್ಷಿಸಲು ಹೋದ ಇಬ್ಬರು ಸೇರಿ ಮೂವರು ಸಾವು..!!!

ಹರಿಯಾಣ : ಕೊಳವೆ ಬಾವಿಯಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಂಡಿಖೇಡ ಗ್ರಾಮದಲ್ಲಿ ನಡೆದಿದೆ. ರಶೀದ್, ಸಮೀರ್ ಮತ್ತು ಮೋನೀಶ್ ಮೃತ ದುರ್ದೈವಿಗಳು.

ಏನಿದು ಘಟನೆ ?: ನುಹ್‌ನ ಮಂಡಿಖೇಡ ಗ್ರಾಮದ ನಿವಾಸಿ ರಶೀದ್ ತನ್ನ ಕೊಳವೆಬಾವಿಯ ಮೇಲೆ ಒಂದು ಕೋಣೆ ನಿರ್ಮಿಸಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅಲ್ಲಿಗೆ ಹೋದಾಗ, ಅವರು ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಬಹಳ ಹೊತ್ತು ಆ ವ್ಯಕ್ತಿಯಿಂದ ಯಾವುದೇ ಚಲನೆ ಕಂಡುಬರದಿದ್ದಾಗ, ಅಲ್ಲಿಯೇ ಹತ್ತಿರದಲ್ಲಿ ನಿಂತಿದ್ದ ಸಮೀರ್ ಮತ್ತು ಮೋನಿಶ್ ಅವರು ರಶೀದ್​ನನ್ನು ಕಾಪಾಡುವ ಸಲುವಾಗಿ ಬಾವಿಗೆ ಇಳಿದಿದ್ದಾರೆ. ಆದರೆ, ದುರಾದೃಷ್ಟವಶಾತ್ ವಿಷಕಾರಿ ಅನಿಲ ಅವರನ್ನೂ ಆವರಿಸಿದೆ.

ಈ ವೇಳೆ ಶೌಕೀನ್ ಎಂಬುವರು ಬಾವಿಗೆ ಬಿದ್ದು ಉಸಿರುಗಟ್ಟಿದ ಮೂವರನ್ನು ರಕ್ಷಿಸುವ ನಿಟ್ಟಿನಲ್ಲಿ ಬಾವಿಗೆ ಇಳಿಯಲು ಮುಂದಾಗಿದ್ದಾರೆ. ಅವರು ಬಾವಿಯ ಕೆಳಭಾಗವನ್ನು ತಲುಪುವ ಮೊದಲೇ ಉಸಿರುಗಟ್ಟಲು ಶುರುವಾಗಿದೆ. ಈ ವೇಳೆ ಮೇಲೆ ನಿಂತಿದ್ದ ಕೆಲವರು ಅವರನ್ನು ವಾಪಸ್​ ಮೇಲಕ್ಕೆ ಎಳೆದುಕೊಂಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ವಿಷಕಾರಿ ಅನಿಲದಿಂದ ಮೂವರು ಸಾವು : ಅವಘಡದ ನಂತರ ಸ್ಥಳದಲ್ಲಿ ಭಾರಿ ಜನಸಮೂಹ ಸೇರಿತ್ತು. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಗ್ರಾಮಸ್ಥರೊಂದಿಗೆ ಸುಮಾರು 2 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿತು. ಸಾಕಷ್ಟು ಪ್ರಯತ್ನದ ನಂತರ, ಮೂವರನ್ನೂ ಬಾವಿಯಿಂದ ಹೊರತೆಗೆಯಲಾಯಿತು. ನಂತರ ಆಸ್ಪತ್ರೆಯಲ್ಲಿ ಮೂವರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣ : ಈ ಬಗ್ಗೆ ಮಾತನಾಡಿದ ಅಗ್ನಿಶಾಮಕ ದಳದ ಅಧಿಕಾರಿ ಸಚಿನ್, ಆಮ್ಲಜನಕ ಸಿಲಿಂಡರ್ ಸಹಾಯದಿಂದ ಮೂವರನ್ನೂ ಬಾವಿಯಿಂದ ಹೊರತೆಗೆಯಲಾಯಿತು. ಆದರೆ ಆಗಲೇ ತಡವಾಗಿತ್ತು. ಈ ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಎರಡು ಅಗ್ನಿಶಾಮಕ ವಾಹನಗಳು ಮತ್ತು ಎರಡು ಆಂಬ್ಯುಲೆನ್ಸ್‌ಗಳು ಸ್ಥಳದಲ್ಲಿದ್ದವು ಎಂದು ಹೇಳಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳಕ್ಕೆ ಆಗಮಿಸಿದ ನಗೀನಾ ಪೊಲೀಸರು ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ಆರಂಭಿಸಿದರು. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ. ಅವಘಡದ ಬಗ್ಗೆ ಗ್ರಾಮಸ್ಥರಿಗೆ ತಿಳಿದ ತಕ್ಷಣ, ನೂರಾರು ಜನರು ಸ್ಥಳಕ್ಕೆ ದೌಡಾಯಿಸಿದರು. ನಂತರ ಆಸ್ಪತ್ರೆಗೂ ಹೋಗಿದ್ದಾರೆ. ಈ ಘಟನೆಯ ಬಗ್ಗೆ ಎಲ್ಲರೂ ದುಃಖ ವ್ಯಕ್ತಪಡಿಸಿದ್ದಾರೆ. ಈ ಅಪಘಾತದ ನಂತರ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article