ಕುಂದಾಪುರ :ಭಾವಿ ಪತಿ ಫೋಟೋ ರಿವೀಲ್ ಮಾಡಿದ ಚೈತ್ರಾ ಕುಂದಾಪುರ.
Thursday, May 8, 2025

ಕುಂದಾಪುರ :ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಚೈತ್ರಾ ಕುಂದಾಪುರ ಅವರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನೊಂದಿಗೆ ಹಸೆಮಣೆ.
ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ನಮ್ಮದು 12 ವರ್ಷಗಳ ಪ್ರೀತಿ. ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಪ್ರೀತಿಸಿದ ಹುಡುಗನೊಂದಿಗೆ ಮೇ 9ರಂದು ಕುಂದಾಪುರದಲ್ಲಿ ಮದುವೆ ಆಗುತ್ತಿದ್ದೇನೆ. ಈಗಾಗಲೇ ಮೆಹಂದಿ ಸೇರಿದಂತೆ ಮದುವೆ ಶಾಸ್ತ್ರಗಳು ಆರಂಭ ಆಗಿದೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನಿಸಿದ್ದೇವೆ ಎಂದು ಹೇಳಿದ್ದಾರೆ.
ಆ್ಯನಿಮೇಷನ್ ಕೋರ್ಸ್ ಮಾಡಿದ್ದ ಶ್ರೀಕಾಂತ್ ಕಶ್ಯಪ್ ಸುದ್ದಿವಾಹಿನಿವೊಂದರಲ್ಲಿ ಚೈತ್ರಾ ಜೊತೆ ಕೆಲಸ ಮಾಡಿದ್ದರು. ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸದಲ್ಲಿ ಶ್ರೀಕಾಂತ್ ತೊಡಗಿಸಿಕೊಂಡಿದ್ದಾರೆ. ಸತತ 12 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದೆ.