ಮಂಗಳೂರು:ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕುತ್ತಿದ್ದ ಬ್ಯಾರಿ ರಾಯಲ್ ಇನ್ ಸ್ಟಾ ಗ್ರಾಮ್ ಪೇಜ್ ರದ್ದು ; ಉಳ್ಳಾಲದಲ್ಲಿ ವ್ಯಕ್ತಿಯ ವಶಕ್ಕೆ ಪಡೆದು ವಿಚಾರಣೆ.

ಈ ಪೇಜ್ ನಲ್ಲಿ ಒಂದು ಲಕ್ಷದಷ್ಟು ಮಂದಿ ಫಾಲೋವರ್ ಗಳಿದ್ದು ಜನರನ್ನು ಉದ್ರೇಕಿಸಿ ಒಬ್ಬರಿಗೊಬ್ಬರು ದ್ವೇಷ ಭಾವನೆ ಹುಟ್ಟುವಂತೆ ಮಾಡಲಾಗುತ್ತಿತ್ತು. ಈ ಬಗ್ಗೆ ಮಂಗಳೂರಿನ ಬರ್ಕೆ ಮತ್ತು ಮುಲ್ಕಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು ತನಿಖೆಯನ್ನು ಸಿಇಎನ್ ಠಾಣೆಗೆ ವರ್ಗಾಯಿಸಲಾಗಿತ್ತು. ಸದ್ರಿ ಪೇಜ್ ಬಗ್ಗೆ ಮಾಹಿತಿ ನೀಡುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಪೊಲೀಸರು ಪತ್ರ ಬರೆದಿದ್ದರು. ಅದರಂತೆ, ಸಂಬಂಧಪಟ್ಟ ಲಾ ಎನ್ಫೋರ್ಸ್ ಮೆಂಟ್ ಏಜನ್ಸಿಯವರು ಬ್ಯಾರಿ ರಾಯಲ್ ನವಾಬ್ ಹೆಸರಿನ ಪೇಜ್ ಅನ್ನು ರದ್ದು ಪಡಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 'ಬ್ಯಾರಿ ಆಫ್ ಉಳ್ಳಾಲ' ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಎರಡು ವರ್ಷಗಳ ಹಿಂದೆ ಕೊಲೆಯಾದ ಫಾಜಿಲ್ ಫೋಟೊ ಹಾಕಿ ಮಿಸ್ ಯು ಅಂತ ಬರೆಯಲಾಗಿತ್ತು. ಇದಕ್ಕೆ ಕಮೆಂಟ್ ಹಾಕಿದ್ದ ವ್ಯಕ್ತಿಯೊಬ್ಬ ಒಂದಕ್ಕೆ ಮುಗಿದಿಲ್ಲ, ಇನ್ನೂ ನಾಲ್ಕು ಬಾಕಿಯಿದೆ ಎಂಬುದಾಗಿ ಸಂದೇಶ ಬರೆದಿದ್ದ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಮೆಂಟ್ ಮಾಡಿದ್ದ ಮೊಹಮ್ಮದ್ ಅಕ್ರಂ ಹಳೆಯಂಗಡಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ