ಮಂಗಳೂರು :ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಮನೆಯ ಕಾಂಪೌಂಡ್ ಹಾರಿ ಅಂಗಳಕ್ಕೆ ಬಿದ್ದ ಕಾರು...!!!

ಮಂಗಳೂರು: ಟೈರ್ ಸ್ಪೋಟಗೊಂಡ ಕಾರೊಂದು ಅಪಘಾತಕ್ಕೀಡಾಗಿ ಮನೆಯ ಕಾಂಪೌಂಡ್ ಹಾರಿ ಬಂದು ಅಂಗಳಕ್ಕೆ ಬಂದು ಬಿದ್ದಂತಹ ಘಟನೆ ಮಂಗಳೂರಿನ ಮರಕಡದಲ್ಲಿ ನಡೆದಿದೆ. ಘಟನೆಯ ವೀಡಿಯೋ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಮರಕಡದಲ್ಲಿ ಬರುತ್ತಿದ್ದಾಗ ಏಕಾಏಕಿ ಕಾರಿನ ಟೈರ್ ಬ್ಲಾಸ್ಟ್ ಆಗಿದ್ದು, ಇದರಿಂದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ವೇಗವಾಗಿ ಸಾಗಿ ಪಕ್ಕದ ಕಾಂಪೌಂಡ್ ಏರಿ ಮನೆಯೊಂದರ ಗೋಡೆಗೆ ಗುದ್ದಿ ಅಂಗಳಕ್ಕೆ ಬಿದ್ದಿದೆ. ಕೂಡಲೇ ಅಲ್ಲಿಗೆ ಓಡಿ ಬಂದ ಸ್ಥಳೀಯರು ಮಗುಚಿ ಬಿದ್ದ ಕಾರನ್ನು ನೇರವಾಗಿ ನಿಲ್ಲಿಸಿ ಕಾರಿನೊಳಗಿದ್ದ ಫಾದರ್ ಆಂಡ್ರೂ ಅವರನ್ನು ಅಲ್ಲಿಂದ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ದೇವರೇ ನನ್ನನ್ನು ಬದುಕಿಸಿದ್ದಾನೆ ಎಂದು ಹೇಳಿದರು. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದವರನ್ನು ಮಂಗಳೂರಿನ ಬೋಂದೆಲ್‌ನ ಸಂತ ಲಾರೆನ್ಸ್ ಚರ್ಚ್‌ನ ಧರ್ಮಗುರು ಫಾದರ್ ಆಂಡ್ರೂ ಲಿಯೋ ಡಿಸೋಜಾ ಎಂದು ಗುರುತಿಸಲಾಗಿದೆ.