ಉತ್ತರಪ್ರದೇಶ :ತಾಯಿ, ಪತ್ನಿ ಹತ್ಯೆಗೈದು ಮೆದುಳಿನ ಮಾಂಸ ತಿಂದ ಮಾದಕವ್ಯಸನಿ...!!!

ಉತ್ತರ ಪ್ರದೇಶ :ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ಅವರ ತಲೆಗಳನ್ನು ಜಜ್ಜಿ, ಮಾಂಸವನ್ನು ಕಿತ್ತು ಗ್ರಾಮಸ್ಥರ ಮುಂದೆಯೇ ತಿಂದಿರುವ ಘಟನೆ ಉತ್ತರ ಪ್ರದೇಶದ ಕುಶಿನಗರದಲ್ಲಿ ಭೀಕರ ಭೀಭತ್ಸವೆನಿಸುವಲ್ಲಿ ನಡೆದಿದೆ.
ತನ್ನ ತಾಯಿ ಮತ್ತು ಹೆಂಡತಿಯನ್ನು ಮನೆಯ ಮೇಲ್ಛಾವಣಿಯ ಮೇಲೆಯೇ ಹೊಡೆದು ಕೊಂದ ಆರೋಪಿ ಬಳಿ ಅವರ ತಲೆಯನ್ನು ಇಟ್ಟಿಗೆಗಳಿಂದ ಒಡೆದು, ತಲೆಬುರುಡೆಯಿಂದ ಮಾಂಸವನ್ನು ಕಿತ್ತು ತಿನ್ನುವ ಪ್ರಯತ್ನ ಮಾಡಿದ್ದಾನೆ.
ಕೊಲೆಯಾದ ಮಹಿಳೆಯರ ಕಿರುಚಾಟ ಮತ್ತು ಸಾಮಾನ್ಯವಾಗಿರದ ಚಟುವಟಿಕೆಯಿಂದ ಎಚ್ಚರಗೊಂಡ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿದಾಗ, ಆರೋಪಿ ಸಿಕಂದರ್ ಮಾಂಸದ ತುಂಡುಗಳನ್ನು ಅವರ ಮೇಲೆ ಎಸೆಯಲು ಆರಂಭಿಸಿದ್ದಾನೆ. ಈ ಭೀಕರ ಘಟನೆಯನ್ನು ಇಡೀ ಗ್ರಾಮವೇ ಭಯಭೀತಿಯಿಂದ ನೋಡಿದೆ.
ಆರೋಪಿಯನ್ನು 30 ವರ್ಷದ ಸಿಕಂದರ್ ಗುಪ್ತಾ ಎಂದು ಗುರುತಿಸಲಾಗಿದೆ. ಈತ ಮುಂಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಸುಮಾರು ಒಂದು ತಿಂಗಳ ಹಿಂದಷ್ಟೇ ಗ್ರಾಮಕ್ಕೆ ಮರಳಿದ್ದ. ಸಿಕಂದರ್ ಗುಪ್ತಾ ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದು, ಆಗಾಗ್ಗೆ ತನ್ನ ಹೆಂಡತಿ ಮತ್ತು ತಾಯಿಯ ಮೇಲೆ ಹಲ್ಲೆ ಮಾಡುತ್ತಿದಿದ್ದಲ್ಲದೇ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.