ಹಾಸನ :ಪತ್ನಿಯನ್ನು ಬರ್ಬರ ಹತ್ಯೆ ಮಾಡಿ ಬಳಿಕ ಶವವನ್ನು ನದಿಗೆ ಬಿಸಾಡಿದ ಪತಿ..!!

ಹಾಸನ : ಪಾಪಿ ಪತಿ ಪತ್ನಿಯ ಬರ್ಬರ ಹತ್ಯೆ ಮಾಡಿ ಬಳಿಕ ಶವವನ್ನು ನದಿಗೆ ಬಿಸಾಡಿರುವ ಘಟನೆ ಆಲೂರು ತಾಲ್ಲೂಕಿನ, ಯಡೂರು ಗ್ರಾಮದಲ್ಲಿ ಘಟನೆ ನಡೆದಿದೆ.
ರಾಧ (40) ಪತಿಯಿಂದಲೇ ಕೊಲೆಯಾದ ಪತ್ನಿ. ಕುಮಾರ (46) ಪತ್ನಿಯನ್ನೇ ಕೊಲೆಗೈದ ಆರೋಪಿ ಪತಿ. ಕುಮಾರ-ರಾಧ 22 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತ್ನಿ ರಾಧ ಮೇಲೆ ಕುಮಾರ ಅನುಮಾನ ಪಡುತ್ತಿದ್ದ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ಎಂಟು ವರ್ಷಗಳಿಂದ ಪತಿ-ಪತ್ನಿ ಪ್ರತ್ಯೇಕವಾಗಿ ವಾಸವಿದ್ದರು ಇತ್ತೀಚೆಗೆ ಹಾಸನದ ಆಡುವಳ್ಳಿಯಲ್ಲಿ ಮೃತ ರಾಧ ವಾಸವಿದ್ದರು.
ರಾಧ ಜ.10 ರಂದು ಸಂಜೆ ಯಡೂರು ಗ್ರಾಮಕ್ಕೆ ಬಂದಿದ್ದರು. ರಾತ್ರಿ10.30 ರ ಸಮಯದಲ್ಲಿ ಪತ್ನಿ ಶೀಲ ಶಂಕಿಸಿ ಪತಿ ಕುಮಾರ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿ ಪತ್ನಿ ರಾಧ ಕಪಾಳಕ್ಕೆ ಹೊಡೆದು ಕೊಲೆ ಮಾಡಿ, ಅಂದು ರಾತ್ರಿ 12 ಗಂಟೆ ನಂತರ ಶವಕ್ಕೆ ಬಟ್ಟೆ ಸುತ್ತಿ ಬೈಕ್‌ನಲ್ಲಿ ತೆಗೆದುಕೊಂಡು ಹೋಗಿ ಹಾಸನ ಹೊರವಲಯದ ಕಂದಲಿ ಬಳಿ ಹರಿಯುವ ಯಗಚಿ ನದಿಗೆ ಬಿಸಾಡಿದ್ದಾನೆ.
ರಾಧ ಪುತ್ರ ವಿಶ್ವಾಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಯಗಚಿ ನದಿಯಲ್ಲಿ ರಾಧ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.