ಮಥುರಾ :ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಡ್ರೈವರ್ ; ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ ಎಂದು ರಂಪಾಟ, ನಾಗ ಪೊಲೀಸ್ ವಶಕ್ಕೆ....!

ಮಥುರಾ :ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಡ್ರೈವರ್ ; ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ ಎಂದು ರಂಪಾಟ, ನಾಗ ಪೊಲೀಸ್ ವಶಕ್ಕೆ....!

ಮಥುರಾ : ಆಟೋ ಚಾಲಕನೊಬ್ಬ ತನಗೆ ಕಚ್ಚಿದ ನಾಗರಹಾವನ್ನೇ ಜೇಬಿನಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ಒತ್ತಾಯಿಸಿರುವ ವಿಡಿಯೋವೊಂದು ಸೋಶಿಯಲ್ ಮೆಡಿಯದಲ್ಲಿ ಸಕತ್ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದ್ದು, ಪಾನಮತ್ತ ಆಟೋ ಚಾಲಕ ತನಗೆ ಹಾವು ಕಚ್ಚಿದೆ ಎಂದು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಯಾರೂ ಅತನಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಗಲಾಟೆ ಮಾಡಿದ್ದಾನೆ.

ಈ ವೇಳೆ ಸಿಬ್ಬಂದಿಯೊಬ್ಬರು ಆತನನ್ನು ವಿಚಾರಿಸಿದಾಗ ತನ್ನ ಜರ್ಕಿನ್ ಒಳಗಿದ್ದ ಹಾವನ್ನು ತೆಗೆದು ತೋರಿಸಿ ಈ ಹಾವು ನನಗೆ ಕಚ್ಚಿದೆ. ಚಿಕಿತ್ಸೆ ಕೊಡಿ ಎಂದು ಕೇಳಿದರೂ ಯಾರೂ ಚಿಕಿತ್ಸೆ ನೀಡುತ್ತಿಲ್ಲ. ಅರ್ಧಗಂಟೆಯಿಂದ ಯಾರೂ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾನೆ.

ಆತ ಜೇಬಿನಿಂದ ನಾಗರಹಾವನ್ನು ಹೊರತೆಗೆಯುತ್ತಲೇ ಅಲ್ಲಿದ್ದವರು ಹೌಹಾರಿದ್ದಾರೆ. ಹಾವು ಇತರ ರೋಗಿಗಳಿಗೆ ಅಪಾಯವನ್ನುಂಟುಮಾಡಬಹುದು ಎಂಬ ಕಾರಣಕ್ಕೆ ಹಾವನ್ನು ಆಸ್ಪತ್ರೆಯ ಹೊರಗೆ ಬಿಡುವಂತೆ ಹೇಳಿದಾಗ, ಆತ ಅದನ್ನು ಕೇಳಲು ನಿರಾಕರಿಸಿದನು. ಈ ವಿಚಾರ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕಾಗಮಿಸಿ ಆಟೋ ಚಾಲಕನಿಂದ ನಾಗರಹಾವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ದೀಪಕ್ ಗೆ ಇಂಜೆಕ್ಷನ್ ನೀಡಿ ಮನೆಗೆ ಕಳುಹಿಸಲಾಗಿದೆ.

Ads on article

Advertise in articles 1

advertising articles 2

Advertise under the article