ಬೆಂಗಳೂರು :ಉಂಡ ಮನೆಗೆ ಕನ್ನ – ಮನೆ ಕೆಲಸಕ್ಕಿದ್ದ ದಂಪತಿಯೇ ಮನೆಯಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಕದ್ದು ಎಸ್ಕೇಪ್...!
Friday, January 2, 2026

ಬೆಂಗಳೂರು: ಉದ್ಯಮಿ ಕುಟುಂಬ ಹೊಸ ವರ್ಷಾಚರಣೆಗೆಂದು ಅನ್ಯ ರಾಜ್ಯಕ್ಕೆ ತೆರಳಿದ್ದ ವೇಳೆ ಮನೆ ಕೆಲಸಕ್ಕಿದ್ದ ದಂಪತಿಯೇ ಮನೆಯಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಕದ್ದು ಎಸ್ಕೇಪ್ ಆಗಿದ್ದಾರೆ.
ಉದ್ಯಮಿ ಕುಟುಂಬ ಬೇರೆ ರಾಜ್ಯಕ್ಕೆ ತೆರಳುವ ವೇಳೆ ಕೆಲಸಗಾರರ ಬಳಿ ಕೀ ಕೊಟ್ಟು ತೆರಳಿತ್ತು. ಇದನ್ನೇ ಬಂಡವಾಳ ಮಾಡಕೊಂಡು ಮನೆಯಲ್ಲಿ ಆರೋಪಿಗಳು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.
ಡಿ.30ರಂದು ಸದಾಶಿವ ನಗರದ ಉದ್ಯಮಿ ಅಭಿಷೇಕ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬರೋಬ್ಬರಿ 1.37 ಕೋಟಿ ರೂ. ಮೌಲ್ಯದ ಚಿನ್ನ, ವಾಚ್ಗಳನ್ನು ಕಳವು ಮಾಡಲಾಗಿದೆ. ಆ ಪೈಕಿ ಚಿನ್ನ 1.27 ಕೋಟಿ ರೂ. ಮೌಲ್ಯದಾಗಿದ್ದರೆ, ವಾಚ್ಗಳು 10 ಲಕ್ಷ ಬೆಲೆಬಾಳುವಂತದ್ದು ಎಂದು ತಿಳಿದುಬಂದಿದೆ. ಆರೋಪಿಗಳಾದ ಹಾಜಿರ ಬೇಗಂ ಮತ್ತುಆಕೆಯಪತಿ ಶಾಹೀರ್ಗೆ ಖಾಕಿ ಬಲೆ ಬೀಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ.