ಮಂಗಳೂರು: ಬ್ಯಾಂಕ್ ಆಫ್ ಬರೋಡಾಗೆ ಭಾರೀ ವಂಚನೆ ; ಪೆರ್ನೆ ಶಾಖೆಯ ಸೇಫ್ ಲಾಕರಿನಿಂದ ಚಿನ್ನ, ಎಟಿಎಂನಿಂದ 70 ಲಕ್ಷ ನಗದು ಎಗರಿಸಿದ ಮ್ಯಾನೇಜರ್, ಉಂಡ ಮನೆಗೆ ದ್ರೋಹ ಬಗೆದು ನಾಪತ್ತೆ....!!!

ಮಂಗಳೂರು: ಬ್ಯಾಂಕ್ ಆಫ್ ಬರೋಡಾಗೆ ಭಾರೀ ವಂಚನೆ ; ಪೆರ್ನೆ ಶಾಖೆಯ ಸೇಫ್ ಲಾಕರಿನಿಂದ ಚಿನ್ನ, ಎಟಿಎಂನಿಂದ 70 ಲಕ್ಷ ನಗದು ಎಗರಿಸಿದ ಮ್ಯಾನೇಜರ್, ಉಂಡ ಮನೆಗೆ ದ್ರೋಹ ಬಗೆದು ನಾಪತ್ತೆ....!!!

ಮಂಗಳೂರು : ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಬಂಟ್ವಾಳ ತಾಲೂಕಿನ ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ಬ್ಯಾಂಕ್ ಶಾಖೆಯಿಂದ 70.86 ಲಕ್ಷ ರೂ. ಲಪಟಾಯಿಸಿದ್ದಲ್ಲದೆ, ಸೇಫ್ ಲಾಕರಿನಿಂದ 15 ಗ್ರಾಮ್ ಚಿನ್ನವನ್ನು ಎಗರಿಸಿ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

04-09-2023 ರಿಂದ 19-12-2025 ರ ಅವಧಿಯಲ್ಲಿ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ವ್ಯವಸ್ಥಾಪಕನಾಗಿದ್ದ ಆಂಧ್ರ ಮೂಲದ ಸುಬ್ರಹ್ಮಣ್ಯಂ (30) ಎಂಬ ವ್ಯಕ್ತಿ ಉಂಡ ಮನೆಗೇ ಭಾರೀ ದ್ರೋಹ ಎಸಗಿ ನಾಪತ್ತೆಯಾಗಿದ್ದಾನೆ.‌ ಈತ ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯ ಜಂಟಿ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ಹೊಂದಿದ್ದರು.

ಆರೋಪಿ ವ್ಯಕ್ತಿ 06-02-2024 ರಿಂದ 16-12-2025 ರ ವರೆಗೆ ಎಟಿಎಂಗೆ ನಿಗದಿತ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ರೂ.70,86,000/- ಹಣವನ್ನು ದುರುಪಯೋಗ ಪಡಿಸಿದ್ದಾನೆ. 19-12-2025 ರಂದು ಸೇಫ್ ಲಾಕರ್ ಪರಿಶೀಲನೆ ವೇಳೆ ರೂ.55,000/- ಮೌಲ್ಯದ 4.400 ಗ್ರಾಂ ಚಿನ್ನ ವಂಚಿಸಿರುವುದು ಬೆಳಕಿಗೆ ಬಂದಿದೆ. ಹಣದ ದುರುಪಯೋಗ ಮೇಲಧಿಕಾರಿಗಳಿಗೆ ತಿಳಿಯುತ್ತಿದ್ದಂತೆ 17-12-2025 ರಂದು ಯಾರಿಗೂ ತಿಳಿಸದೇ ತೆರಳಿರುತ್ತಾರೆ. ಒಟ್ಟು ವಂಚನೆಯ ಮೌಲ್ಯ ರೂ.71,41,000/- ಆಗಿರುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾ ಜೆಪ್ಪು ಶಾಖೆಯ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ್ (50) ಡಿ.23ರಂದು ದೂರು ನೀಡಿದ್ದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025, ಕಲಂ 314, 316(5), 318(2) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.

Ads on article

Advertise in articles 1

advertising articles 2

Advertise under the article