ದೆಹಲಿ:ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್  12 ಸಾವಿರಕ್ಕೂ ಹೆಚ್ಚು ಸಾವಿನ ಶಂಕೆ, ಆರು ದಿನಗಳಿಂದ ಫೋನ್, ಇಂಟರ್ನೆಟ್ ಸ್ಥಗಿತ, ಆಸ್ಪತ್ರೆ ಮುಂದೆ ರಾಶಿ ಬಿದ್ದ ಶವಗಳು! ಭಾರತೀಯರಿಗೆ ಕೂಡಲೇ ದೇಶ ಬಿಡಲು ಸೂಚನೆ...!!!

ದೆಹಲಿ:ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ 12 ಸಾವಿರಕ್ಕೂ ಹೆಚ್ಚು ಸಾವಿನ ಶಂಕೆ, ಆರು ದಿನಗಳಿಂದ ಫೋನ್, ಇಂಟರ್ನೆಟ್ ಸ್ಥಗಿತ, ಆಸ್ಪತ್ರೆ ಮುಂದೆ ರಾಶಿ ಬಿದ್ದ ಶವಗಳು! ಭಾರತೀಯರಿಗೆ ಕೂಡಲೇ ದೇಶ ಬಿಡಲು ಸೂಚನೆ...!!!

ನವದೆಹಲಿ: ಇರಾನ್ ಅಧ್ಯಕ್ಷ ಹಯಾತೊಲ್ಲಾ ಖಮೇನಿ ಆಡಳಿತ ವಿರೋಧಿಸಿ ದೇಶವ್ಯಾಪಿ ಎದ್ದಿರುವ ದಂಗೆ ತೀವ್ರಗೊಂಡಿದ್ದು, ಅರಾಜಕ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಎರಡು ವಾರದಲ್ಲಿ 12 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. 

ರಾಜಧಾನಿ ಟೆಹ್ರಾನ್ ನಗರದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು ಎಲ್ಲೆಂದರಲ್ಲಿ ರಸ್ತೆಗಳ ಮಧ್ಯೆ ಶವಗಳ ರಾಶಿ ಬಿದ್ದಿದೆ. ರಸ್ತೆ ಬದಿಯ ಸರ್ಕಾರಿ ಕಟ್ಟಡಗಳು ಬೆಂಕಿಗೆ ಆಹುತಿಯಾಗಿದ್ದು ಪ್ರತಿಭಟನಕಾರರು ಬೀದಿಯಲ್ಲಿದ್ದರೆ ಅತಿ ಹೆಚ್ಚು ವಿದೇಶಿ ಪ್ರಜೆಗಳು ಸಾವಿಗೀಡಾದ ಬಗ್ಗೆ ಶಂಕೆ ಇದೆ. ಕಳೆದ ಆರು‌ ದಿನಗಳಿಂದ ಇಂಟರ್ನೆಟ್ ಮತ್ತು ಫೋನ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು ಎಲ್ಲಿ ಏನಾಗುತ್ತಿದೆ ಎನ್ನುವುದು ಯಾರಿಗೂ ತಿಳಿಯದಾಗಿದೆ. 

ಹೊರಗಿನವರಿಗೆ ಇರಾನ್ ಒಳಗಡೆ ಸಂಪರ್ಕ ಇಲ್ಲದಾಗಿದೆ. ಗಡಿಭಾಗಕ್ಕೆ ಬಂದು ಕೆಲವು ಪ್ರಜೆಗಳು ವಿಪರೀತ ಸಾವಿನ ಬಗ್ಗೆ ವರದಿಗಳನ್ನು ಮಾಧ್ಯಮಕ್ಕೆ ಹೇಳುತ್ತಿದ್ದಾರೆ.‌ ಸಿಬಿಎಸ್ ನ್ಯೂಸ್ ಎಂಬ ಸ್ಥಳೀಯ ಮಾಧ್ಯಮವೊಂದು 12 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ವೈದ್ಯರ ಮೂಲಗಳಿಂದ ಖಚಿತವಾಗಿದೆ, ಆದರೆ ಕೆಲವು ಮೂಲಗಳ ಪ್ರಕಾರ, ಒಂದು ವಾರದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಎಂದಿದೆ. ಕೆಲವರು 600 ಕಿಮೀ ದೂರಕ್ಕೆ ಬಂದು ಸಣ್ಣ ಸಣ್ಣ ವಿಡಿಯೋ ಕ್ಲಿಪ್ ಗಳನ್ನು ಮಾಧ್ಯಮಕ್ಕೆ ಹಂಚಿಕೊಂಡಿದ್ದಾರೆ.‌ ಅದರಲ್ಲಿ ಶವಗಳು ರಾಶಿ ಬಿದ್ದಿರುವುದು, ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಆಸ್ಪತ್ರೆ ಹೊರಗಡೆ ಹಾಕಿರುವ ಚಿತ್ರಗಳಿವೆ. 

ಇರಾನ್ ಬಿಟ್ಟು ತೆರಳಲು ಭಾರತೀಯರಿಗೆ ಸೂಚನೆ 

ಇರಾನ್ ಸ್ಥಿತಿ ಬಿಗಡಾಯಿಸಿದ್ದರಿಂದ ಅಲ್ಲಿರುವ ಭಾರತೀಯ ನಾಗರಿಕರು ಕೂಡಲೇ ಇರಾನ್ ತೊರೆಯುವಂತೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸಲಹೆ ನೀಡಲಾಗಿದೆ. ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು ಮತ್ತು ಪ್ರವಾಸಿಗರು ಕಮರ್ಷಿಯಲ್ ವಿಮಾನ ಸೇರಿದಂತೆ ಲಭ್ಯವಿರುವ ಸಾರಿಗೆ ಮೂಲಕ ಕೂಡಲೇ ಇರಾನ್‌ನಿಂದ ತೆರಳಲು ಸೂಚಿಸಲಾಗಿದೆ. 

ಡಿ.28ರಿಂದ ಟೆಹ್ರಾನ್ ಸೇರಿದಂತೆ ಕೆಲವು ಕಡೆಗಳಲ್ಲಿ ದಿಢೀರ್ ಎನ್ನುವಂತೆ ಪ್ರತಿಭಟನೆ ಭುಗಿಲೆದ್ದಿದ್ದವು. ವಿದೇಶಿ ಪ್ರೇರಿತ ಪ್ರತಿಭಟನೆ ಎಂದು ಇರಾನ್ ಆಡಳಿತ ಅದನ್ನು ಹತ್ತಿಕ್ಕಲು ಮುಂದಾಗಿತ್ತು. ಆದರೆ ಪ್ರತಿಭಟನೆ ದಿನ ಕಳೆದಂತೆ ದೇಶವ್ಯಾಪಿ ಹರಡಿದ್ದು ಸರ್ಕಾರವನ್ನೇ ಟಾರ್ಗೆಟ್ ಮಾಡಿಕೊಂಡಿದೆ. ನಿರಂತರ ಪ್ರತಿಭಟನೆ, ಹಿಂಸಾಚಾರ, ಇಂಟರ್ನೆಟ್, ಫೋನ್ ಸಂಪರ್ಕ ಕಡಿತಗೊಂಡಿದ್ದರಿಂದ ಜನಸಾಮಾನ್ಯರಿಗೆ ಊಟಕ್ಕಿಲ್ಲದ ಸ್ಥಿತಿಯಾಗಿದೆ. ಇರಾನ್ ಕರೆನ್ಸಿ ರಿಯಾಲ್ ಮೌಲ್ಯ ಅಮೆರಿಕನ್ ಡಾಲರ್ ವಿರುದ್ಧ 1.4 ಮಿಲಿಯನ್ ತಲುಪಿದೆ. 

ಇದೇ ವೇಳೆ, ಯುವ ಪ್ರತಿಭಟನಕಾರರನ್ನು ಇರಾನ್ ಭದ್ರತಾ ಪಡೆಗಳು ಬಂಧಿಸುತ್ತಿದ್ದು ಒಂದು ವಾರದ ಹಿಂದೆ ಬಂಧಿತನಾಗಿದ್ದ 26 ವರ್ಷದ ಯುವಕನನ್ನು ಗಲ್ಲಿಗೇರಿಸುವುದಾಗಿ ಇರಾನ್ ಹೇಳಿದೆ. ಆದರೆ ಗಲ್ಲಿಗೇರಿಸುವ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಖಂಡಿಸಿದ್ದು, ಇದಕ್ಕೆ ತೀವ್ರ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಜನರಿಗೆ ಪ್ರತಿಭಟನೆ ತೀವ್ರಗೊಳಿಸಲು ಸಲಹೆ ಮಾಡಿದ್ದು ನಾನು ನಿಮ್ಮ ಸಹಾಯಕ್ಕೆ ಬರುತ್ತೇನೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article