ಬೆಂಗಳೂರು :ಮಲಗಿದಾಗ ಇಣುಕಿ ನೋಡುವ ಸೈಕೋ! ಬೆಂಗಳೂರಿನ ವೈದ್ಯೆ ಮಾಡಿದ್ದೇನು?
Sunday, December 14, 2025

ಬೆಂಗಳೂರು: ನಗರದ ವೈದ್ಯೆಯೊಬ್ಬರು ಸೈಕೋ ಕಾಟಕ್ಕೆ ಬೇಸತ್ತು ಹೋಗಿದ್ದಾರೆ.
ಮಲಗಿರುವಾಗ ಇಣುಕಿ ಹಾಕುವುದು, ಗೇಟ್ ಮುಂದೆ ಪಾಗಲ್ ಪ್ರೇಮಿ ತರ ಬಂದು ನಿಲ್ಲುವುದು. ಅಷ್ಟೇ ಅಲ್ಲದೆ ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಪ್ರತ್ಯಕ್ಷನಾಗುತ್ತಾನೆ. ಪ್ರಶ್ನೆ ಮಾಡಿದರೆ ಮಾತನಾಡುವುದಿಲ್ಲ. ದಿಟ್ಟಿಸಿ ನೋಡುತ್ತಾ ನಿಲ್ಲುತ್ತಾನಂತೆ.
ಸೈಕೋ ಕಾಟದಿಂದ ಕಳೆದ ಮೂರು ತಿಂಗಳಿನಿಂದ ವೈದ್ಯೆ ಮಾನಸಿಕ ಕಿರುಕುಳ ಅನುಭವಿಸಿದ್ದಾರೆ. ಸೈಕೋ ಕಾಟ ವಿಪರೀತವಾದ ಹಿನ್ನೆಲೆಯಲ್ಲಿ 112ಗೆ ದೂರು ನೀಡಿದ್ದ ವೈದ್ಯೆ, ಪೊಲೀಸರು ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.
ಸದ್ಯ ಅಪರಿಚಿತ ವ್ಯಕ್ತಿಗಾಗಿ ಶೋಧ ನಡೆದಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ