ಗಾಜಿಯಬಾದ್ :ಮನೆ ಮಾಲೀಕರನ್ನೇ ಕೊಲೆ ಮಾಡಿದ ಬಾಡಿಗೆದಾರರು – ಸೂಟ್‌ಕೇಸ್‌ನಲ್ಲಿ ತುಂಡು ತುಂಡಾದ ದೇಹ ಪತ್ತೆ...!!!

ಗಾಜಿಯಬಾದ್: ಬಾಡಿಗೆದಾರರು ಮನೆ ಮಾಲೀಕರನ್ನೇ ಕೊಲೆ ಮಾಡಿರುವ ಘಟನೆ ಗಾಜಿಯಾಬಾದ್ನ ರಾಜನಗರದ ಔರಾ ಚಿಮೆರಾ ಸೊಸೈಟಿಯಲ್ಲಿ ನಡೆದಿದೆ.
ಕಳೆದ ಐದಾರು ತಿಂಗಳುಗಳಿಂದ ಬಾಡಿಗೆ ಪಾವತಿಸದ ಬಾಡಿಗೆದಾರರು ಈ ಕೃತ್ಯ ಮಾಡಿದ್ದಾರೆ.ಕೊಲೆಯ ನಂತರ, ಆರೋಪಿ ದಂಪತಿ ಮಹಿಳೆಯ ದೇಹವನ್ನು ತುಂಡು ಮಾಡಿ ಹಾಸಿಗೆಯ ಕೆಳಗೆ ಸೂಟ್‌ಕೇಸ್‌ನಲ್ಲಿರಿಸಿದ್ದರು ಎಂದು ಆರೋಪಿಸಲಾಗಿದೆ. ಮಹಿಳೆ ಹಲವು ಗಂಟೆಗಳ ಕಾಲ ಕಾಣಿಸದ ಕಾರಣ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು.
ಫ್ಲಾಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಹಿಳೆ ಸಂಜೆ ಫ್ಲಾಟ್‌ಗೆ ಪ್ರವೇಶಿಸಿರುವುದು ಮಾತ್ರ ಕಂಡುಬಂದಿತ್ತು. ಆದರೆ ಆಕೆ ಒಮ್ಮೆಯೂ ಹೊರಗೆ ಹೋಗಿರಲಿಲ್ಲ. ಅನುಮಾನದ ಮೇರೆಗೆ ಸೊಸೈಟಿ ನಿವಾಸಿಗಳು ಬಾಡಿಗೆದಾರರ ಫ್ಲಾಟ್‌ಗೆ ಹೋಗಿ ಅಲ್ಲಿ ಪರಿಶೀಲಿಸಿದಾಗ ಮಹಿಳೆಯ ಶವ ಸೂಟ್‌ಕೇಸ್‌ನಲ್ಲಿ ತುಂಬಿರುವುದನ್ನು ಕಂಡುಕೊಂಡಿದ್ದಾರೆ.
ಘಟನೆಯ ಬಗ್ಗೆ ವಿವರಗಳನ್ನು ನಂದಗ್ರಾಮ ಎಸಿಪಿ ಉಪಾಸನಾ ಪಾಂಡೆ ಹಂಚಿಕೊಂಡಿದ್ದು, ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ