ಬೆಂಗಳೂರು :ಮಂಗಳಮುಖಿ ಮೇಲೆ ಸಹವರ್ತಿಗಳಿಂದಲೇ ಹಲ್ಲೆ, ತಲೆ ಬೋಳಿಸಿ ವಿಕೃತಿ! 7 ಮಂದಿ ಬಂಧನ.!
Friday, October 31, 2025

ಬೆಂಗಳೂರು: ಮಂಗಳಮುಖಿಯರ ಗ್ಯಾಂಗ್ ತಮ್ಮ ಜತೆಗಾತಿಯ ಮೇಲೆಯೇ ಮನಸೋ ಇಚ್ಛೆ ಹಲ್ಲೆ ಮಾಡಿ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿ ವಿರಾಟ್ ನಗರದಲ್ಲಿ ನಡೆದಿದೆ.
ಸುಕನ್ಯಾ ಎಂಬ ಮಂಗಳಮುಖಿಯ ತಲೆಬೋಳಿಸಿ ಹಲ್ಲೆ ಮಾಡಿ ವಿಕೃತಿ ಮೆರೆದಿದೆ.
ತಮ್ಮ ಟೀಂ ಬಿಟ್ಟು ಬೇರೊಂದು ತಂಡದ ಜತೆ ಹೋಗಿದ್ದಕ್ಕೆ ಆಕ್ರೋಶಗೊಂಡ ಪ್ರೀತಿ, ಚಿನ್ನಿ ಮಂಗಳಮುಖಿಯರ ತಂಡ ಸುಕನ್ಯಾಳನ್ನು ಕೆಆರ್ ಪುರದಿಂದ ಆಟೋದಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಬಂದು ಬೊಮ್ಮನಹಳ್ಳಿಗೆ ಕರೆದೊಯ್ದು ಹಲ್ಲೆ ಮಾಡಿದೆ.
ಸುಕನ್ಯಾ ಕೈಮುಗಿದು ಬೇಡಿಕೊಂಡರೂ ಎಲ್ಲರೂ ಸೇರಿ ಹಿಟ್ಟಿನ ದೊಣ್ಣೆ , ಸೌಟು, ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವುದನ್ನು ವಿಡಿಯೋ ಕಾಲ್ ಮಾಡಿ ಮತ್ತೊಬ್ಬ ಮಂಗಳಮುಖಿಗೆ ತೋರಿಸಿದ್ದು, ಸದ್ಯ ಈ ವಿಡಿಯೋ ಕಾಲ್ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಬೊಮ್ಮನಹಳ್ಳಿ ಪೊಲೀಸರು ಸೊಮೋಟೋ ಕೇಸ್ ದಾಖಲಿಸಿಕೊಂಡು 7 ಮಂಗಳಮುಖಿಯರನ್ನು ಬಂಧಿಸಿದ್ದಾರೆ.