ಮಂಗಳೂರು:ದೋಷಯುಕ್ತ ಇಲೆಕ್ಟ್ರಿಕ್ ವಾಹನ ;  ಓಲಾ ಕಂಪನಿ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು..!!

ಮಂಗಳೂರು:ದೋಷಯುಕ್ತ ಇಲೆಕ್ಟ್ರಿಕ್ ವಾಹನ ; ಓಲಾ ಕಂಪನಿ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು..!!

ಮಂಗಳೂರು: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಮಾರಾಟ ಮಾಡಿದ್ದ ಓಲಾ ಕಂಪೆನಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದ್ದು ವಾಹನ ಸರಿಪಡಿಸಿ ಕೊಡದಿದ್ದರೆ ಅದರ ಪೂರ್ತಿ ಮೊತ್ತವನ್ನು ಬಡ್ಡಿ ಸಹಿತ ಪಾವತಿಸಲು ಸೂಚಿಸಿದೆ. 

ಮಂಗಳೂರಿನ ಸರ್ಕಾರಿ ಸ್ವಾಮ್ಯದ ಕಂಪೆನಿಯೊಂದರ ಉದ್ಯೋಗಿ ಉದಯ ಕುಮಾರ್ ಬಿ.ಸಿ. ಅವರು ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಿಂದ ವಾಹನವನ್ನು ಖರೀದಿಸಿದ್ದರು. ಓಲಾ ಸ್ಕೂಟರ್‌ಗೆ ಅವರು 1.17 ಲಕ್ಷ ರೂ.ಗಳನ್ನು ಪಾವತಿಸಿದ್ದರು. ಖರೀದಿಸಿದ ಒಂದು ತಿಂಗಳಿಗೆ ಸ್ಕೂಟರ್ ರಸ್ತೆ ಮಧ್ಯದಲ್ಲಿ ಹಠಾತ್ತಾಗಿ ನಿಲ್ಲುತ್ತಿತ್ತು. ಈ ಬಗ್ಗೆ ಗ್ರಾಹಕರು ದೂರು ನೀಡಿದಾಗ ಮೊದಲ ಬಾರಿಗೆ ಓಲಾ ಸಂಸ್ಥೆಯೇ ವಾಹನದ ದುರಸ್ತಿ ಮಾಡಿತ್ತು.

ಆದರೆ, ಸ್ಕೂಟರ್ ಇದೇ ಸಮಸ್ಯೆಯಿಂದ ಪದೇ ಪದೇ ರಸ್ತೆ ಮಧ್ಯೆ ನಿಲ್ಲುತ್ತಿದ್ದರಿಂದ ಗ್ರಾಹಕರು ತೀವ್ರ ಸಮಸ್ಯೆಗೆ ಗುರಿಯಾಗಿದ್ದರು. ರಿಪೇರಿ ನೆಪದಲ್ಲಿ ಓಲಾ ಸಂಸ್ಥೆ ಸ್ಕೂಟರ್‌ನ್ನು ತನ್ನ ಬಳಿ ಇರಿಸಿತ್ತಾದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಲೀಗಲ್ ನೋಟಿಸ್ ಜಾರಿಗೊಳಿಸಿದ ಗ್ರಾಹಕರು ಗ್ರಾಹಕರ ಪರಿಹಾರ ಆಯೋಗಕ್ಕೆ ಮೊರೆ ಹೋಗಿದ್ದರು. ಉದಯ್ ಕುಮಾರ್ ಸಲ್ಲಿಸಿದ ದೂರನ್ನು ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ, ಓಲಾ ಸಂಸ್ಥೆ ಸೇವಾ ನ್ಯೂನ್ಯತೆ ತೋರಿದೆ ಮತ್ತು ದೋಷಯುಕ್ತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂದು ತೀರ್ಪು ನೀಡಿತು.

ಪ್ರಮಾದ ಎಸಗಿದ ಓಲಾ ಕಂಪೆನಿ 45 ದಿನದಲ್ಲಿ ಸ್ಕೂಟರ್‌ನ್ನು ಸಂಚಾರ ಯೋಗ್ಯವಾಗಿ ರಿಪೇರಿ ಮಾಡಿಕೊಡಬೇಕು. ತಪ್ಪಿದ್ದಲ್ಲಿ, 45 ದಿನದೊಳಗೆ ಶೇಕಡಾ 6ರ ಬಡ್ಡಿಯೊಂದಿಗೆ 1.17 ಲಕ್ಷ ರೂ. ಮರು ಪಾವತಿಸಲು ಆದೇಶ ನೀಡಿದೆ. ಇದರ ಜೊತೆಗೆ ಸೇವಾ ನ್ಯೂನತೆಗಾಗಿ ರೂ. 10,000/- ದಂಡ ಹಾಗೂ ಪ್ರಕರಣದ ವೆಚ್ಚವಾಗಿ ರೂ. 5000/-ವನ್ನು 45 ದಿನದೊಳಗೆ ಪಾವತಿಸಲು ಆದೇಶ ನೀಡಿದೆ. ಗ್ರಾಹಕರ ಪರವಾಗಿ ಮಂಗಳೂರಿನ ವಕೀಲರಾದ ತೇಜಕುಮಾರ್ ಡಿ.ಎಂ. ವಾದ ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article