
ರಾಷ್ಟ್ರೀಯ ಸುದ್ದಿ:ಗೂಗಲ್ ಜೆಮಿನಿ ಆಪ್ ಟ್ರೆಂಡ್ ಎಐ ಫೋಟೋ ಎಡಿಟ್ ಮಾಡುವ ಮುನ್ನ ಹುಷಾರ್…. ಯುವತಿ ದೇಹದ ಮೇಲಿನ ಕಪ್ಪು ಚುಕ್ಕೆ ಗುರುತಿಸಿದ ಎಐ..!!

ರಾಷ್ಟ್ರೀಯ ಸುದ್ದಿ:ಗೂಗಲ್ ಜೆಮಿನಿ ನ್ಯಾನೋ ಬನಾನಾ AI ಎಂಬ ಹೊಸ ಚಿತ್ರ ರಚನೆ ಮತ್ತು ಎಡಿಟಿಂಗ್ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯಂತೆ ಆವರಿಸಿದೆ. ಈ ಟ್ರೆಂಡ್‌ಗೆ ಸೇರಲು ಜನರು AI ಬಳಸಿ ಹೈಪರ್-ರಿಯಲಿಸ್ಟಿಕ್ ದೃಶ್ಯಗಳನ್ನು ರಚಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ಕೂಡ ನಮ್ಮದು ಒಂದು ಇರಲಿ ಅಂತ ಬೇರೆ ಬೇರೆ ಸ್ಟೈಲ್ನಲ್ಲಿ ಎಡಿಟ್ ಮಾಡಿಕೊಳ್ಳುತ್ತಿದ್ದಾರೆ.
ಝಲಕ್ ಭಾವನಾನಿ (jhalakbhawnani) ಇನ್‌ಸ್ಟಾ ಖಾತೆ ಹೊಂದಿರುವ ಯುವತಿ ಫೋಟೋವೊಂದನ್ನ ಜೆಮಿನಿ ನ್ಯಾನೋ ಬನಾನಾದಲ್ಲಿ ಶೇರ್ ಮಾಡಿದ್ದಳು. ಅದು ದೇಹ ಫುಲ್ ಮುಚ್ಚಿಕೊಂಡಿರುವ ಗ್ರೀನ್ ಕಲರ್ ಡ್ರೆಸ್ನಲ್ಲಿನ ಫೋಟೋನ ಅಪ್ಲೋಡ್ ಮಾಡಿದ್ದಳು. ಇದಕ್ಕೆ ತಕ್ಕಂತೆ ವಾಪಸ್ ಕಪ್ಪು ಬಣ್ಣದ ಸೀರೆಯಲ್ಲಿ ಯುವತಿಯ ಫೋಟೋ ಸೂಪರ್ ಆಗಿ ವಾಪಸ್ ಬಂದಿದೆ.
ಆದರೆ ಫುಲ್ ಶಾಕಿಂಗ್ ವಿಷ್ಯ ಏನೆಂದರೆ, ಯುವತಿಯ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಇದೆ. ಇದು ಮೊದಲ ಫೋಟೋದಲ್ಲಿ ಕಾಣಿಸುವುದಿಲ್ಲ. ಏಕೆಂದರೆ ಯುವತಿ ಫುಲ್ ಡ್ರೆಸ್ ಧರಿಸಿದ್ದಾರೆ. ಆದರೆ ಜೆಮಿನಿ ಬನಾನಾ AI ಕಳಿಸಿರುವ ಫೋಟೋದಲ್ಲಿ ಎಡಗೈ ಮೇಲೆ ಕಪ್ಪು ಬಣ್ಣದ ಚಿಕ್ಕದಾದ ಮಚ್ಚೆ ಬಂದಿದೆ.
ಈ ಬಗ್ಗೆ ಎಲ್ಲರೂ ತಂತ್ರಜ್ಞಾನದ ಬಗ್ಗೆ ಹುಷಾರ್ ಆಗಿರಬೇಕು, ಜಾಗೃತವಾಗಿರಿ ಎಂದು ತಮ್ಮ ಇನ್‌ಸ್ಟಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಗೂಗಲ್ ಜೆಮಿನಿ ನೀಡಿದ ಹೊಸ ರೂಪದ ಫೋಟೋ ನೋಡಿ ಬೆರಗುಗೊಂಡಿದ್ದಾರೆ. ಮನುಷ್ಯನನ್ನು ತಂತ್ರಜ್ಞಾನ ಅರಿತುಕೊಳ್ಳುತ್ತಿರುವ ಆಳ ಮತ್ತು ಅದರ ಭಯಾನಕತೆ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾಳೆ. ಗೂಗಲ್‌ನ ಜೆಮಿನಿ ನ್ಯಾನೋ ಬನಾನಾ ಟೂಲ್‌ನಲ್ಲಿ ನಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿ ಪ್ರಾಂಪ್ಟ್ ಕೊಟ್ಟರೆ ಸಾಕು ಸೀರೆಯಲ್ಲಿ ಹೇಳೆಯ ಕಾಲದ ಸುಂದರ, ರೆಟ್ರೋ ಲುಕ್‌ನಲ್ಲಿನ ಫೋಟೋ ಬರುತ್ತದೆ. ಆದರೆ ದೇಹದ ಮೇಲಿನ ಸಣ್ಣದಾದ ಕಪ್ಪು ಚುಕ್ಕಿ ಹೇಗೆ ಗುರುತಿಸಿತು ಎನ್ನುವುದು ಯುವತಿಯ ಬಿಗ್ ಪ್ರಶ್ನೆಯಾಗಿದೆ.