ಉತ್ತರಪ್ರದೇಶ :ಮಾದಕ ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಿದ ಕೋಪದಲ್ಲಿ 29 ಚಮಚ, 19 ಬ್ರಷ್ ನುಂಗಿದ!ಭೂಪ..!!
ಹಾಪುರದ ಗರ್ಹ್ ರಸ್ತೆಯಲ್ಲಿರುವ ದೇವನಂದಿನಿ ಆಸ್ಪತ್ರೆಯ ವೈದ್ಯ ಡಾ.ಶ್ಯಾಮ್ ಕುಮಾರ್ ಮಾತನಾಡಿ, ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬುಲಂದ್‌ಶಹರ್ ನಿವಾಸಿ ಸಚಿನ್ (40) ಎಂಬಾತನನ್ನು ಒಂದು ವಾರದ ಹಿಂದೆ ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದರು. ಆತ ಮಾದಕ ವ್ಯಸನಿಯಾಗಿದ್ದು, ಕುಟುಂಬಸ್ಥರು ಗಾಜಿಯಾಬಾದ್‌ನಲ್ಲಿರುವ ಮಾದಕ ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಿದ್ದರು. ಇದರಿಂದ ಕೋಪಗೊಂಡು, ಅಲ್ಲಿದ್ದ ಸ್ಟೀಲ್ ಚಮಚಗಳು ಮತ್ತು ಹಲ್ಲುಜ್ಜುವ ಬ್ರಷ್‌ಗಳನ್ನು ಮುರಿದು ತಿನ್ನಲು ಪ್ರಾರಂಭಿಸಿದ್ದ. ಇದರಿಂದ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎಂದು ತಿಳಿಸಿದರು.
ಹೊಟ್ಟೆಯಲ್ಲಿ 29 ಚಮಚಗಳು, 19 ಬ್ರಷ್‌ಗಳು ಪತ್ತೆ: ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಮಾಡಿದಾಗ ಸಚಿನ್ ಹೊಟ್ಟೆಯಲ್ಲಿ ಲೋಹದ ಮತ್ತು ಪ್ಲಾಸ್ಟಿಕ್ ವಸ್ತುಗಳು ಇರುವುದು ಕಂಡುಬಂತು. ಎಂಡೋಸ್ಕೋಪಿಯಿಂದ ಅವುಗಳನ್ನು ತೆಗೆದುಹಾಕಬಹುದು ಎಂದು ನಾವು ಭಾವಿಸಿದ್ದೆವು. ಆದ್ದರಿಂದ ಆತನನ್ನು ಮೀರತ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಎಂಡೋಸ್ಕೋಪಿ ಮೂಲಕ ಚಮಚ ಮತ್ತು ಹಲ್ಲುಜ್ಜುವ ಬ್ರಷ್‌ಗಳನ್ನು ಹೊರತೆಗೆಯಲು ಸಾಧ್ಯವಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದರು. ನಂತರ ಸಚಿನ್ ನಮ್ಮ ಆಸ್ಪತ್ರೆ ಮತ್ತೆ ಬಂದಾಗ ಕಳೆದ ವಾರ ಶಸ್ತ್ರಚಿಕಿತ್ಸೆಗೆ ಒಳಗಾದರು. ಹೊಟ್ಟೆಯಲ್ಲಿ 29 ಸ್ಟೀಲ್ ಚಮಚಗಳು ಮತ್ತು 19 ಹಲ್ಲುಜ್ಜುವ ಬ್ರಷ್‌ಗಳು ಇದ್ದವು. ಇವುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು ಎಂದು ಮಾಹಿತಿ ನೀಡಿದರು.
ಕೋಪದಿಂದ ಚಮಚಗಳು ಮತ್ತು ಬ್ರಷ್‌ಗಳನ್ನು ನುಂಗಿದೆ: ಸಚಿನ್ ಮಾತನಾಡಿ, "ನನ್ನ ಕುಟುಂಬಸ್ಥರು ನನ್ನನ್ನು ಮಾದಕ ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಿದ್ದರು. ಮೊದಲು ಅವರು ನನಗೆ ಔಷಧಿಗಳನ್ನು ತಂದುಕೊಟ್ಟ ನಂತರ ಮನೆಗೆ ಕರೆದೊಯ್ಯುವುದಾಗಿ ಹೇಳಿದರು. ನಂತರ ಅವರು ನನ್ನನ್ನು ಇಲ್ಲಿಯೇ ಬಿಟ್ಟು ಹೋದರು. ಇದರಿಂದ ಕೋಪಗೊಂಡು, ನಾನು ಚಮಚಗಳು ಮತ್ತು ಬ್ರಷ್‌ಗಳನ್ನು ಮುರಿದು ನುಂಗಿದೆ. ಚಮಚಗಳು, ಬಟ್ಟಲುಗಳು ಮತ್ತು ಹಲ್ಲುಜ್ಜುವ ಬ್ರಷ್‌ಗಳನ್ನು ಕೇಂದ್ರದಲ್ಲಿದ ಸ್ಟೂಲ್ ಮೇಲೆ ಇಡಲಾಗಿತ್ತು. ನಾನು ಅವುಗಳನ್ನು ಅಲ್ಲಿಂದ ಎತ್ತಿಕೊಂಡು ಬಂದು ಸ್ನಾನಗೃಹಕ್ಕೆ ಹೋಗಿ ಮುರಿದು ನುಂಗಿ ನೀರು ಕುಡಿಯುತ್ತಿದ್ದೆ. ಮಾದಕ ವ್ಯಸನ ಮುಕ್ತ ಕೇಂದ್ರದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು" ಎಂದು ಹೇಳಿದರು