ಬೀದರ್ :ಗೂಡ್ಸ್ ವಾಹನ – ಬೈಕ್ ನಡುವೆ ಡಿಕ್ಕಿ : ತಾಯಿ,ಮಗಳು ಸ್ಥಳದಲ್ಲೇ ಸಾವು..!!
Monday, August 25, 2025
ಬೀದರ್: ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ತಾಯಿ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಮಾಪುರ ಗ್ರಾಮದಲ್ಲಿ ನಡೆದಿದೆ.
ಬೋಸ್ಲಾ ಗ್ರಾಮದ ತುಕ್ಕಮ್ಮ ಕಿಶನ್ (56) ಹಾಗೂ ಮಗಳು ಸುರೇಖಾ ಗುಂಡಪ್ಪ (30) ಮೃತರು. ಮಹಾರಾಷ್ಟ್ರದಿಂದ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹಾಲಿನ ಗೂಡ್ಸ್ ವಾಹನ ಬೈಕ್ ಗೆ ದಿಕ್ಕಿ ಹೊಡೆದಿದೆ.
ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.