ಉಡುಪಿ :ಹೈದರಾಬಾದಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಪ್ರೇಮದ ನಂಟು ; ಗಂಡನ ಬಿಡಲೊಪ್ಪದೆ ಊರಿಗೆ ಬಂದಿದ್ದ ಮಹಿಳೆ, ಪಡುಬಿದ್ರಿ ಮನೆಗೆ ಹುಡುಕಿ ಬಂದ ಹಳೆ ನೆಂಟ !

ಉಡುಪಿ :ಹೈದರಾಬಾದಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಪ್ರೇಮದ ನಂಟು ; ಗಂಡನ ಬಿಡಲೊಪ್ಪದೆ ಊರಿಗೆ ಬಂದಿದ್ದ ಮಹಿಳೆ, ಪಡುಬಿದ್ರಿ ಮನೆಗೆ ಹುಡುಕಿ ಬಂದ ಹಳೆ ನೆಂಟ !

ಉಡುಪಿ : ಹೈದರಾಬಾದ್‌ನಲ್ಲಿ ಉಚ್ಚಿಲ ಮೂಲದ ಮಹಿಳೆಯೊಂದಿಗೆ ಎರಡು ವರ್ಷ ರಿಯಲ್ ಎಸ್ಟೇಟ್ ಉದ್ಯಮ ನಡೆಸಿದ್ದ ವ್ಯಕ್ತಿಯೊಬ್ಬ ಮಂಗಳವಾರ ಪಡುಬಿದ್ರಿ ಠಾಣೆ ವ್ಯಾಪ್ತಿಯ ಉಚ್ಚಿಲದ ಆಕೆಯ ಮನೆಗೆ ನುಗ್ಗಿ ಕುತ್ತಿಗೆ ಹಿಸುಕಿ ಕೊಲೆಗೈಯಲು ಯತ್ನಿಸಿದ ಘಟನೆ ನಡೆದಿದೆ. ಅಷ್ಟರಲ್ಲಿ ಮಹಿಳೆಯ ಗಂಡ ಮತ್ತು ಸ್ಥಳೀಯರು ಸೇರಿದ್ದರಿಂದ ಆರೋಪಿ ಪರಾರಿಯಾಗಿದ್ದಾನೆ. 

ವಿಷಯ ತಿಳಿಯುತ್ತಲೇ ಕಾರ್ಯಾಚರಣೆ ನಡೆಸಿದ ಪಡುಬಿದ್ರಿ ಪೊಲೀಸ್‌ ಠಾಣೆಯ ಪಿಎಸ್‌ಐ ಶಕ್ತಿವೇಲು ಮತ್ತು ಸಿಬಂದಿ ಆರೋಪಿ ಹೈದರಾಬಾದ್ ಮೂಲದ ವಿಶ್ವನಾಥ ನಾಯ್ಡು ಎಂಬಾತನನ್ನು ಉಚ್ಚಿಲದಲ್ಲೇ ಬಂಧಿಸಿದ್ದಾರೆ. ಪಡುಬಿದ್ರಿ ಮೂಲದ ಮಹಿಳೆ ಈ ಹಿಂದೆ ಹೈದರಾಬಾದ್‌ನ ವ್ಯಕ್ತಿಯ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸಿದ್ದು ಈ ವೇಳೆ ಪತಿಯನ್ನು ಬಿಟ್ಟು ತನ್ನನ್ನು ಮದುವೆಯಾಗುವಂತೆ ವಿಶ್ವನಾಥ ನಾಯ್ಡು ಒತ್ತಾಯಿಸಿದ್ದ.

ಮಹಿಳೆಯನ್ನು ಪ್ರೀತಿಸುವುದಾಗಿ ಹೇಳಿ ಪತಿಗೆ ವಿಚ್ಚೇದನ ನೀಡುವಂತೆ ಮತ್ತು ತನ್ನನ್ನು ಮದುವೆಯಾಗಿ ಜೊತೆಗೆ ಇರುವಂತೆ ಪೀಡಿಸುತ್ತಿದ್ದ. ಮಹಿಳೆ ಇದಕ್ಕೆ ವಿರೋಧಿಸಿದಾಗ ನಿನ್ನನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ್ದ ಮಹಿಳೆ ತನ್ನ ಗಂಡನೊಂದಿಗೆ ಉಡುಪಿ ಜಿಲ್ಲೆಯ ಉಚ್ಚಿಲಕ್ಕೆ ಬಂದು ನೆಲೆಸಿದ್ದರು. 2 ತಿಂಗಳ ಬಳಿಕ ಆತ ಹುಡುಕುತ್ತ ಬಂದಿದ್ದು ಮನೆಗೆ ನುಗ್ಗಿ ಮಹಿಳೆಯನ್ನು ಮದುವೆಯಾಗದಿದ್ದರೆ ಸಾಯಿಸುತ್ತೇನೆ ಎಂದು ಹೇಳಿ ಹಲ್ಲೆಗೆ ಯತ್ನಿಸಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ.

Ads on article

Advertise in articles 1

advertising articles 2

Advertise under the article