
ಬೆಂಗಳೂರು :ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತುಟಿ ಕಚ್ಚಿ ವಿಕೃತಿ ; ರಸ್ತೆ ನೀರು ಮೈಮೇಲೆ ಬಿದ್ದಿದ್ದಕ್ಕೆ ಶಿಕ್ಷೆ !

ಬೆಂಗಳೂರು, ಜುಲೈ 23 : ಮನೆಗೆ ದಿನಸಿ ತರಲು ಹೋಗಿದ್ದ ಯುವತಿಯ ತುಟಿ ಕಚ್ಚಿ ವಿಕೃತಿ ಮೆರೆಡಿರುವ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮರೂಫ್ ಷರೀಫ್ (28) ಬಂಧಿತ. ಸಂತ್ರಸ್ತೆ ನೀಡಿದ ದೂರು ಆಧರಿಸಿ ಮರೂಫ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಗೋವಿಂದಪುರದಲ್ಲಿ ವಾಸವಾಗಿರುವ ಯುವತಿ ಮನೆಗೆ ದಿನಸಿ ತರಲು ಸ್ಕೂಟರ್ನಲ್ಲಿ ಬಂದಿದ್ದರು. ಈ ವೇಳೆ ಹಿಂಬಾಲಿಸಿದ ಆರೋಪಿ ನಡುರಸ್ತೆಯಲ್ಲಿ ಆಕೆಯ ತುಟ್ಟಿ ಕಚ್ಚಿ ವಿಕೃತಿ ಮೆರೆದಿದ್ದ. ಈ ಕುರಿತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.
ಗೋವಿಂದಪುರದಲ್ಲಿ ಆರೋಪಿಯು ಬರ್ಡ್ ಶಾಪ್ ಇಟ್ಟುಕೊಂಡಿದ್ದ. ಕಳೆದ ವಾರ ಸ್ಕೂಟರ್ನಲ್ಲಿ ಯುವತಿ ಹೋಗುವಾಗ ಹಿಂಬಾಲಿಸಿ ಕೃತ್ಯವೆಸಗಿದ್ದಾನೆ. ಈ ಸಂಬಂಧ ಯುವತಿ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಆರೋಪಿ, ಯುವತಿ ಗುಂಡಿ ರಸ್ತೆಯಲ್ಲಿ ವೇಗವಾಗಿ ಸ್ಕೂಟರ್ ಚಲಾಯಿಸಿದ್ದರಿಂದ ರಸ್ತೆ ನೀರು ನನ್ನ ಮೈಮೇಲೆ ಬಿತ್ತು, ಅದರಿಂದ ಕೋಪಗೊಂಡು ಕೃತ್ಯವೆಸಗಿದೆ ಎಂದು ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದು ಈಗ ಪೊಲೀಸ್ರು ಆತನನ್ನ ಜೈಲಿಗೆ ತಳ್ಳಿದ್ದಾರೆ.