ಮಾಸ್ಕೋ: ಚೀನಾ ಗಡಿಯಲ್ಲಿ ರಷ್ಯಾ ವಿಮಾನ ಪತನ: 49 ಮಂದಿ ಸಾವು..!!
ಮಾಸ್ಕೋ: 49 ಪ್ರಯಾಣಿಕರಿದ್ದ ರಷ್ಯಾದ ವಿಮಾನವೊಂದು ಚೀನಾ ಗಡಿ ಪ್ರದೇಶದಲ್ಲಿ ಪತನಗೊಂಡಿದೆ.
ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆಂದು ಪ್ರಾಥಮಿಕ ವರದಿಗಳು ಹೇಳಿವೆ.
49 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನವೊಂದು ಪತನಗೊಂಡಿದ್ದು, ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ.
ಐದು ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿದಂತೆ 43 ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನವು ರಷ್ಯಾ-ಚೀನೀ ಗಡಿಯಲ್ಲಿರುವ ಬ್ಲಾಗೊವೆಶ್‌ಚೆನ್ಸ್ಕ್ ನಗರದಿಂದ ಟಿಂಡಾ ಎಂಬ ದೂರದ ಪಟ್ಟಣಕ್ಕೆ ಹಾರುತ್ತಿತ್ತು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ.
ಈ ವಿಮಾನ ಗುರುವಾರ ಬೆಳಗ್ಗೆ ನಾಪತ್ತೆಯಾಗಿತ್ತು. ಪತನಗೊಂಡ ಪ್ರದೇಶದಲ್ಲೇ ವಿಮಾನ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್‌ನ ಸಂಪರ್ಕ ಕಳೆದುಕೊಂಡಿತ್ತು.
ರಷ್ಯಾದ ಪೂರ್ವದಲ್ಲಿ ಸುಮಾರು 50 ಜನರನ್ನು ಹೊತ್ತೊಯ್ಯುತ್ತಿದ್ದ An-24 ಪ್ರಯಾಣಿಕ ವಿಮಾನವೊಂದು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪ್ರಾದೇಶಿಕ ಗವರ್ನರ್ ಗುರುವಾರ ಬೆಳಗ್ಗೆ ತಿಳಿಸಿದ್ದರು.
ವಿಮಾನ ಹಾರಾಟದ ಮಧ್ಯದಲ್ಲಿ ವಾಯು ಸಂಚಾರ ನಿಯಂತ್ರಕರು ವಿಮಾನದ ಸಂಪರ್ಕವನ್ನು ಕಳೆದುಕೊಂಡರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದಾದ ಕೆಲವೇ ಸಮಯದಲ್ಲಿ ವಿಮಾನ ಪತನಗೊಂಡಿದೆ.