ಗುಜರಾತ್: ರಾಯಲ್ ಎನ್‌ಫೀಲ್ಡ್ ಬೈಕ್‌ನೊಂದಿಗೆ ಯುವಕನ ಅಂತ್ಯಕ್ರಿಯೆ!
Sunday, June 22, 2025

ಗುಜರಾತ್ : 18 ವರ್ಷದ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದನು, ನಂತರ ಅವನ ಕುಟುಂಬವು ಅವನ ಅಂತ್ಯಕ್ರಿಯೆ ನಡೆಸುವಾಗ ಅವನ ನೆಚ್ಚಿನ ರಾಯಲ್ ಎನ್‌ಫೀಲ್ಡ್ ಬೈಕ್ ಅನ್ನು ಅವನ ದೇಹದ ಜೊತೆಗೆ ಹೂಳಿರುವ ಘಟನೆ ಗುಜರಾತ್‌ನ ಉತ್ತರಸಂದಾ ಗ್ರಾಮದಲ್ಲಿ ನಡೆದಿದೆ.
ನಡೆದಿದ್ದೇನು?:
ನಾಡಿಯಾಡ್‌ನ ಉತ್ತರಸಂದಾ ಗ್ರಾಮದ ಕ್ರಿಶ್ಚಿಯನ್ ಕಾಲೋನಿಯ ನಿವಾಸಿ 18 ವರ್ಷದ ಕ್ರಿಶ್ ಪರ್ಮಾರ್ ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಗ್ರಾಮದ ಬಳಿ ಅವರ ಬೈಕು ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಈ ಸಮಯದಲ್ಲಿ, ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಹನ್ನೆರಡು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಸಾವನ್ನಪ್ಪಿದನು. ಅವರ ಸಾವು ಕುಟುಂಬದಲ್ಲಿ ತೀವ್ರ ದುಃಖವನ್ನುಂಟುಮಾಡಿತು.