ಮುಂಬೈ :75 ಕೋಟಿ ಸಂಬಳ ಬಿಟ್ಟು ಸನ್ಯಾಸಿಯಾದ ಅಂಬಾನಿಯ ರೈಟ್ ಹ್ಯಾಂಡ್..!!
Monday, June 23, 2025
ಪ್ರಕಾಶ್ ಶಾ ಅಂಬಾನಿ ಅವರ ರೈಟ್ ಹ್ಯಾಂಡ್ ಎಂದೇ ಬಿಂಬಿತಗೊಂಡಿದ್ದ ಇವರು, ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪ್ರಕಾಶ್ ಶಾ ತಮ್ಮ 63ನೇ ವಯಸ್ಸಿನಲ್ಲಿ ಕರ್ತವ್ಯಕ್ಕೆ ಗುಡ್ಬೈ ಹೇಳಿದ್ದರು. ಅದಾದ ಸ್ವಲ್ಪ ಸಮಯದಲ್ಲೇ ದೀಕ್ಷೆ ಪಡೆದು ಆಧ್ಯಾತ್ಮಿಕ ಜೀವನಕ್ಕೆ ಪ್ರವೇಶ ಮಾಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಮಹಾವೀರ ಜಯಂತಿಯ ಸಂದರ್ಭದಲ್ಲಿ ಔಪಚಾರಿಕವಾಗಿ ದೀಕ್ಷೆ ಪಡೆದುಕೊಂಡಿದ್ದಾರೆ. ಅವರ ಹಾದಿಯಲ್ಲೇ ಪತ್ನಿ ನೈನಾ ಶಾ ಕೂಡ ಸಾಗಿದ್ದಾರೆ.
ಪ್ರಕಾಶ್ ಶಾ ಕೆಮಿಕಲ್ ಎಂಜಿನಿಯರ್. ಐಐಟಿ ಬಾಂಬೆಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡಿದ್ದಾರೆ. ನೈನಾ, ಪ್ರಕಾಶ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಪುತ್ರ ಕೂಡ ದೀಕ್ಷೆ ಪಡೆದುಕೊಂಡಿದ್ದು, ಮತ್ತೋರ್ವನಿಗೆ ಮದುವೆ ಆಗಿದ್ದು, ಒಂದು ಮಗು ಇದೆ.
ಸದ್ಯ ಮುಂಬೈನ ಬೋರಿವಳಿಯಲ್ಲಿ ವಾಸವಿದ್ದಾರೆ. ದೀಕ್ಷೆ ಪಡೆದ ನಂತರ ಭುವನ್ ಜೀತ್ ಮಹಾರಾಜ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.