ಬಂಟ್ವಾಳ:ಅಬ್ದುಲ್ ರಹಿಮಾನ್ ಬರ್ಬರ ಕೊಲೆ ಕೇಸ್ ; ಮೂವರು ಪ್ರಮುಖ ಆರೋಪಿಗಳು ಅರೆಸ್ಟ್.
Thursday, May 29, 2025

ಮಂಗಳೂರು : ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಳಿ ಅಬ್ದುಲ್ ರೆಹಿಮಾನ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳದ ದೀಪಕ್ (21) ಪೃಥ್ವಿರಾಜ್ (21) ಚಿಂತನ್ (19) ಬಂಧಿತ ಆರೋಪಿಗಳು. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ರೆಹಮಾನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು ಇದೀಗ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಿಕಪ್ ವಾಹನದಲ್ಲಿ ಮರಳನ್ನು ತಂದು ಮನೆಯೊಂದರ ಬಳಿ ಇಳಿಸುತ್ತಿದ್ದರು ಈ ವೇಳೆ ದುಷ್ಕರ್ಮಿಗಳು ತಲ್ವಾರ್ ಮತ್ತು ಮಚ್ಚು ಲಾಂಗುಗಳಿಂದ ಪಿಕಪ್ ವಾಹನದ ಡ್ರೈವರ್ ಸೀಟ್ ನಲ್ಲಿದ್ದ ಅಬ್ದುಲ್ ರೆಹಮನನ್ನು ಹೊರಗಡೆದು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮತ್ತೊಬ್ಬ ಆರೋಪಿ ಶಫಿ ಮೇಲು ಕೂಡ ಹಲ್ಲೆ ನಡೆಸಿದ್ದಾರೆ.