ಬೆಂಗಳೂರು: ಮತ್ತೆ ವಕ್ಕರಿಸಿದ ಮನುಕುಲವನ್ನು ಇನ್ನಿಲ್ಲದಂತೆ ಕಾಡಿದ ಮಹಾಮಾರಿ ಕರೋನ ವೈರಸ್ ;Covid19 ರಾಜ್ಯದಲ್ಲಿ 40 ಜನರಿಗೆ ಕೊರೋನಾ ಪಾಸಿಟಿವ್.!!

ಬೆಂಗಳೂರು: ಮತ್ತೆ ವಕ್ಕರಿಸಿದ ಮನುಕುಲವನ್ನು ಇನ್ನಿಲ್ಲದಂತೆ ಕಾಡಿದ ಮಹಾಮಾರಿ ಕರೋನ ವೈರಸ್ ;Covid19 ರಾಜ್ಯದಲ್ಲಿ 40 ಜನರಿಗೆ ಕೊರೋನಾ ಪಾಸಿಟಿವ್.!!

ಬೆಂಗಳೂರು :ಮನುಕುಲವನ್ನ ಇನ್ನಿಲ್ಲದಂತೆ ಕಾಡಿದ ಮಹಾಮಾರಿ ಕೊರೊನಾ ವೈರಸ್ ಮತ್ತೆ ವಕ್ಕರಿಸೋದಕ್ಕೆ ಶುರು ಮಾಡಿದೆ. ಕೋವಿಡ್ ಪ್ರಕರಣಗಳು ಮತ್ತೆ ಕಾಣಿಸಿಕೊಂಡಿವೆ. ಮೇ ತಿಂಗಳಲ್ಲಿ ಹೆಚ್ಚಾಗುತ್ತಿದೆ.ಇಂದು ಹೊಸದಾಗಿ 40 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೋವಿಡ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿ ಸಿ ಆರ್ ಮೂಲಕ 344 ಹಾಗೂ ರಾಟ್ ಮೂಲಕ 51 ಸೇರಿದಂತೆ 395 ಜನರನ್ನು ಕೋವಿಡ್ ಪತ್ತೆ ಪರೀಕ್ಷೆಗೆ ಒಳಪಡಿಸಿರುವುದಾಗಿ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ ಪರೀಕ್ಷೆಗೆ ಒಳಪಡಿಸಲಾದಂತ 395 ಜನರಲ್ಲಿ 40 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಕೋವಿಡ್ ಸೋಂಕಿತರಾದಂತ 14 ಮಂದಿ ಗುಣಮುಖರಾಗಿದ್ದಾರೆ.

Ads on article

Advertise in articles 1

advertising articles 2

Advertise under the article