ಬಳ್ಳಾರಿ: ಜೈಲಾಧಿಕಾರಿಗಳ ಮುಂದೆ ಮತ್ತೊಂದು ಡಿಮ್ಯಾಂಡ್ ಮಾಡಿದ ನಟ ದರ್ಶನ್
Monday, October 14, 2024
ಬಳ್ಳಾರಿ: ಜಾಮೀನು ನಿರೀಕ್ಷೆಯಲ್ಲಿದ್ದ ಆರೋಪಿ ದರ್ಶನ್ ಗೆ ನಿರಾಸೆ ಆಗಿದೆ. ಕೋರ್ಟ್ ಬೇಲ್ ನೀಡಲು ನಿರಾಕರಿಸಿದ ವಿಷಯ ತಿಳಿದು ಮತ್ತಷ್ಟು ಮಂಕಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಜೊತೆಗೆ ಜೈಲು ಅಧಿಕಾರಿಗಳ ಮುಂದೆ ಮತ್ತೊಂದು ಡಿಮ್ಯಾಂಡ್ ಮಾಡಿದ್ದಾರಂತೆ. ಆರೋಗ್ಯ ಸಮಸ್ಯೆಗೆ ಒಳಗಾಗಿರುವ ದರ್ಶನ್, ನನಗೆ ಬಳ್ಳಾರಿಯಲ್ಲಿ ಚಿಕಿತ್ಸೆ ಕೊಡಿಸೋದು ಬೇಡ. ಬದಲಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ. ಸ್ಕ್ಯಾನಿಂಗ್, ಸರ್ಜರಿ ಎಲ್ಲವೂ ಮಣಿಪಾಲ್ ಆಸ್ಪತ್ರೆಯಲ್ಲಿ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಹೈಕೋರ್ಟ್ ಮೂಲಕವೇ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲು ಮನವಿ ಸಾಧ್ಯತೆ ಇದೆ. ಪತ್ನಿ ಜೊತೆಗೆ ಚರ್ಚಿಸಿ ಅನಾರೋಗ್ಯದ ಕಾರಣ ನೀಡುವ ಸಾಧ್ಯತೆ ಇದೆ