ಯೌವನದಲ್ಲಿ ಅರಳಿದ್ದ ಪ್ರೀತಿಗೆ ವೃದ್ಧಾಪ್ಯದಲ್ಲಿ ಮದುವೆಯ ಮುದ್ರೆಯೊತ್ತಿದ ಜೋಡಿ! ಅಪರೂಪದಲ್ಲಿ ಅಪರೂಪವಾದ ಅನುಬಂಧ..!!

ಪ್ರೀತಿ ಎಂಬುದು ಮದುರ ಭಾವನೆ… ಬೆಲೆ ಕಟ್ಟಲಾಗದ ಸಂಬಂಧವೂ ಹೌದು. ನಿಷ್ಕಲ್ಮಷ ಪ್ರೀತಿಯ ಎದುರು ಯಾವುದೇ ಕಷ್ಟಗಳೂ ತೃಣಕ್ಕೆ ಸಮಾನ. ಅದಕ್ಕೆ ಸಾಕ್ಷಿ ಈ ಜೋಡಿ. ಯಾವುದೇ ಸಿನೆಮಾ ಕತೆಗಿಂತ ಭಿನ್ನವಾಗಿಲ್ಲ ಈ ಪ್ರೇಮಜೋಡಿಯ ಕತೆ. ಈ ಪ್ರೇಮ ಜೋಡಿ ಈಗ ದಾಂಪತ್ಯಕ್ಕೆ ಕಾಲಿಟ್ಟಿದೆ. ಯೌವನದಲ್ಲಿ ಅರಳಿದ್ದ ಪ್ರೀತಿಗೆ ವೃದ್ಧಾಪ್ಯದಲ್ಲಿ ಮದುವೆಯ ಮುದ್ರೆ ಬಿದ್ದಿದೆ.
ವೃದ್ಧಾಪ್ಯದಲ್ಲಿ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯೊತ್ತಿದ್ದ ಜೋಡಿ 65 ವರ್ಷದ ಜಯಪ್ರಕಾಶ್ ಹಾಗೂ ರಶ್ಮಿ, ಜೀವನದಲ್ಲಿ ಎದುರಾಗಿದ್ದ ಕೆಲ ಅಡೆತಡೆಗಳು ಸಮಯ ಸಂದರ್ಭಕ್ಕೆ ಸಿಲುಕಿ ಇಬ್ಬರು ಬೇರೆ ಬೇರೆಯವರನ್ನು ಮದುವೆಯಾಗಿದ್ದರು. ರಶ್ಮಿಯವರು ಮೊದಲು ಮದುವೆಯಾದರೆ ಜಯಪ್ರಕಾಶ್ ಅವರು ವಿದೇಶಕ್ಕೆ ತೆರಳಿ ಕಾಲಾನಂತರದಲ್ಲಿ ಅವರೂ ಕೂಡ ಬೇರೆಯವರನ್ನು ಮದುವೆಯಾಗಿದ್ದರು. ಇಬ್ಬರು ತಮ್ಮ ಕುಟುಂಬವನ್ನು ಬೆಳೆಸಿದರು, ಇಬ್ಬರಿಗೂ ಮಕ್ಕಳಾಗಿ ಮಕ್ಕಳೂ ದೊಡ್ಡವರಾದರು. ಆದರೆ ರಶ್ಮಿಯವರ ಪತಿ 10 ವರ್ಷಗಳ ಹಿಂದೆ ತೀರಿಕೊಂಡಿದ್ದರೆ ಜಯಪ್ರಕಾಶ್ ಅವರ ಪತ್ನಿ 5 ವರ್ಷಗಳ ಹಿಂದೆ ತೀರಿಕೊಂಡಿದ್ದರು.
ಆದರೆ ಇತ್ತೀಚೆಗೆ ರಶ್ಮಿಯವರನ್ನು ಶಾರ್ಟ್ ಮೂವಿಯೊಂದರಲ್ಲಿ ನೋಡಿದ ಜಯಪ್ರಕಾಶ್ ಅವರು ಕುಟುಂಬದವರ ಮೂಲಕ ಅವರನ್ನು ಮತ್ತೆ ಸಂಪರ್ಕಿಸಿದ್ದರು. ಇದರಿಂದ ಅವರ ಹಳೆಯ ಪ್ರೀತಿ ಮತ್ತೆ ಚಿಗುರಿತು. ಹಾಗೂ ಇವರ ಪ್ರೀತಿಗೆ ಅವರ ಮಕ್ಕಳು ಕೂಡ ಒಪ್ಪಿಗೆಯ ಮುದ್ರೆಯೊತ್ತಿದ್ದರು. ಪರಿಣಾಮ ಇಬ್ಬರು ತಮ್ಮ ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಕುಟುಂಬದರು ಮಕ್ಕಳು ಮೊಮ್ಮಕ್ಕಳ ಸಮ್ಮುಖದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಇವರ ಈ ಮದುವೆ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.