ಉತ್ತರ ಪ್ರದೇಶ :ಪತ್ನಿಯ ಕೊಂದು ರುಂಡ ಕತ್ತರಿಸಿ ಡ್ರಮ್ನಲ್ಲಿಟ್ಟ ಪತಿ...!!

ಉತ್ತರ ಪ್ರದೇಶ :ಆಸ್ತಿ ವಿವಾದ ಪತ್ನಿಯನ್ನೇ ಕೊಲ್ಲುವ ಮಟ್ಟಕ್ಕೆ ಹೋಗಿದೆ. ಪತಿಯೊಬ್ಬ ತನ್ನ ಸಹೋದರರ ಸಹಾಯದಿಂದ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಫಿರೋಜ್ ಬಾದ್ ನಲ್ಲಿ ನಡೆದಿದೆ.
ಮೂವರು ಸಹೋದರರ ಸಹಾಯದಿಂದ ತನ್ನ ಹೆಂಡತಿಯನ್ನು ಕೊಂದು, ಆಕೆಯ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ, ಬಳಿಕ ರುಂಡವನ್ನು ಡ್ರಮ್ನಲ್ಲಿರಿಸಿದ್ದ. ಆರೋಪಿಗಳು ಹರಿತವಾದ ಆಯುಧವನ್ನು ಬಳಸಿ ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಯ ಮೇಲಿನ ಭಾಗವನ್ನು ಡ್ರಮ್‌ನೊಳಗೆ ಬಚ್ಚಿಟ್ಟು, ಮುಂಡವನ್ನು ಮನೆಯೊಳಗೆ ಹಾಸಿಗೆಯ ಮೇಲೆ ಎಸೆಯಲಾಗಿತ್ತು ಎಂದು ಆರೋಪಿಸಲಾಗಿದೆ.
ಪೊಲೀಸರು ಕತ್ತರಿಸಿದ ತಲೆಯನ್ನು ಡ್ರಮ್‌ನಿಂದ ಮತ್ತು ಮುಂಡವನ್ನು ಮನೆಯೊಳಗಿನ ಹಾಸಿಗೆಯಲ್ಲಿ ವಶಪಡಿಸಿಕೊಂಡರು. ಮಾಹಿತಿಯ ಪ್ರಕಾರ, ಮೃತ ಲತಾ ದೇವಿ ಸುಮಾರು 25-26 ವರ್ಷಗಳ ಹಿಂದೆ ಅಶುತೋಷ್ ಅವರನ್ನು ವಿವಾಹವಾಗಿದ್ದರು. ದಂಪತಿ ನಡುವೆ ದೀರ್ಘಕಾಲದಿಂದ ಆಸ್ತಿ ವಿವಾದವಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅಶುತೋಷ್ ಅವರ ಸಹೋದರರು ಈ ಪಿತೂರಿ ನಡೆಸಿ ಜನವರಿ 12 ರ ಮಧ್ಯರಾತ್ರಿ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿಸಲಾಗಿದೆ.
ಅಶುತೋಷ್ ಒಬ್ಬ ಸರಳ ವ್ಯಕ್ತಿ ಆತ ಈ ಕೊಲೆ ಮಾಡಿದ್ದಾನೆಂದರೆ ನಂಬಲು ಸಾಧ್ಯವಾಗುತ್ತಿಲ್ಲ, ಆತನ ಸಹೋದರರ ಕೈವಾಡ ಇದರಲ್ಲಿದೆ, ಅವರ ಜತೆ ಸೇರಿಕೊಂಡು ಈತ ಕೂಡ ಈ ಘೋರ ಅಪರಾಧವೆಸಗಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ತಿಳಿಸಿದ್ದಾರೆ. ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿತು.