ಮುಂಬೈ :ಹೋಟೆಲ್‌ನಲ್ಲಿ ತಪ್ಪಾಗಿ ಬೇರೆ ರೂಮ್‌ ಬಾಗಿಲು ತಟ್ಟಿದ ಮಹಿಳೆ ಮೇಲೆ ಸಾಮೂಹಿಕ ಅ*ತ್ಯಾಚಾರ..!!

ಮುಂಬೈ :ಹೋಟೆಲ್‌ನಲ್ಲಿ ತಪ್ಪಾಗಿ ಬೇರೆ ರೂಮ್‌ ಬಾಗಿಲು ತಟ್ಟಿದ ಮಹಿಳೆ ಮೇಲೆ ಸಾಮೂಹಿಕ ಅ*ತ್ಯಾಚಾರ..!!

ಮುಂಬೈ: ಹೋಟೆಲ್‌ನಲ್ಲಿ ತಪ್ಪಾಗಿ ಬೇರೆ ರೂಮ್‌ ಬಾಗಿಲು ತಟ್ಟಿದ ಮಹಿಳೆ ಮೇಲೆ ಮೂವರು ಎಣ್ಣೆ ಮತ್ತಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದಲ್ಲಿ  ನಡೆದಿದೆ.

ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ, ಛತ್ರಪತಿ ಸಂಭಾಜಿ ನಗರದ ಹೋಟೆಲ್‌ಗೆ ಕೊಠಡಿ ಸಂಖ್ಯೆ 105 ರಲ್ಲಿ ತಂಗಿದ್ದ ಸ್ನೇಹಿತೆಯಿಂದ ಹಣ ಸಂಗ್ರಹಿಸಲು ಭೇಟಿ ನೀಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಮೂವರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. L

 

ಮಹಿಳೆ ಹೋಟೆಲ್‌ನಲ್ಲಿ ತನ್ನ ಸ್ನೇಹಿತೆಯ ಕೊಠಡಿಗೆ ಬಂದಿದ್ದಳು. ಸ್ವಲ್ಪ ಹೊತ್ತು ಹೊರಗಡೆ ಹೋಗಿ ಮತ್ತೆ ಬರುವಾಗ ಗೊಂದಲಗೊಂಡು ಬೇರೆ ಕೊಠಡಿಯ ಬಾಗಿಲು ತಟ್ಟಿದ್ದಾಳೆ. ನಂ.205 ಕೊಠಡಿ ಒಳಗೆ ಘನಶ್ಯಾಮ್ ಭೌಲಾಲ್ ರಾಥೋಡ್, ರಿಷಿಕೇಶ್ ತುಳಸಿರಾಮ್ ಚವಾಣ್ ಮತ್ತು ಕಿರಣ್ ಲಕ್ಷ್ಮಣ್ ರಾಥೋಡ್ ಬಿಯರ್ ಪಾರ್ಟಿ ಮಾಡುತ್ತಿದ್ದರು. ಬಾಗಿಲು ತೆರೆದಾಗ, ಆ ಮಹಿಳೆ ತಾನು ಎಲ್ಲಿಗೆ ಬಂದಿದ್ದೇನೆಂದು ಗೊಂದಲಕ್ಕೆ ಒಳಗಾಗಿದ್ದಳು.

ನಂತರ ಆರೋಪಿಗಳು ಆಕೆಯನ್ನು ಕೊಠಡಿಯೊಳಗೆ ಎಳೆದುಕೊಂಡು ಹೋಗಿ ಬಲವಂತವಾಗಿ ಬಿಯರ್ ಕುಡಿಯುವಂತೆ ಮಾಡಿದ್ದಾರೆ. ರಾತ್ರಿಯಿಡೀ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ಆಕೆ ತಪ್ಪಿಸಿಕೊಂಡಿದ್ದಾಳೆ. ಮಹಿಳೆ ಕಿರುಚುತ್ತಾ ಕೋಣೆಯಿಂದ ಹೊರಗೆ ಓಡಿ ವೇದಾಂತ್ ನಗರ ಪೊಲೀಸ್ ಠಾಣೆಗೆ ತಲುಪಿದ್ದು, ಅಲ್ಲಿ ದೂರು ದಾಖಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article