ಮುಂಬೈ :ಗನ್ ಪಾಯಿಂಟ್ ಇಟ್ಟು ಮಹಿಳಾ ಉದ್ಯಮಿ ಬೆದರಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ; ದೂರು ದಾಖಲು..!!

ಮುಂಬೈ :ಗನ್ ಪಾಯಿಂಟ್ ಇಟ್ಟು ಮಹಿಳಾ ಉದ್ಯಮಿ ಬೆದರಿಸಿ ಬೆತ್ತಲೆ ವಿಡಿಯೋ ರೆಕಾರ್ಡ್ ; ದೂರು ದಾಖಲು..!!

ಮುಂಬೈ: ಫಾರ್ಮಾ ಕಂಪನಿಯ ಬಾಸ್ ,ಮಹಿಳಾ ಉದ್ಯಮಿಗೆ ಗನ್ ಪಾಯಿಂಟ್ ಇಟ್ಟು ಬೆದರಿಸಿ ಬೆತ್ತಲೆಗೊಳಿಸಿ ರೆಕಾರ್ಡ್ ಮಾಡಿರುವ ಘಟನೆ  ಮುಂಬೈಯಲ್ಲಿ ನಡೆದಿದೆ.

 

ದೂರಿನ ಪ್ರಕಾರ, ಸಭೆಯ ನೆಪದಲ್ಲಿ 51 ವರ್ಷದ ಮಹಿಳಾ ಉದ್ಯಮಿಯನ್ನು ಜಾಯ್ ಜಾನ್ ಪ್ಯಾಸ್ಕಲ್ ಪೋಸ್ಟ್ ಫ್ರಾಂಕೋ-ಇಂಡಿಯನ್ ಫಾರ್ಮಾಸ್ಯುಟಿಕಲ್ಸ್  ಕಚೇರಿಗೆ ಆಹ್ವಾನಿಸಿದ್ದಾರೆ. ಅಲ್ಲಿ ಆಕೆಗೆ ಕಿರುಕುಳ ನೀಡಲಾಗಿದ್ದು, ಗನ್ ಪಾಯಿಂಟ್ ನಲ್ಲಿ ಬಟ್ಟೆ ಬಿಚ್ಚಿಸಲಾಗಿದೆ.

ಬಳಿಕ ಆರೋಪಿ, ಆಕೆಯ ನಗ್ನ ವೀಡಿಯೊಗಳು ಮತ್ತು ಫೋಟೋಗಳನ್ನು ರೆಕಾರ್ಡ್ ಮಾಡಿದ್ದು, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಅವುಗಳನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆಫ್ರಾಂಕೋ-ಇಂಡಿಯನ್ ಫಾರ್ಮಾಸ್ಯುಟಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸ್ಥಾಪಕ ಸದಸ್ಯರಾದ ಜಾಯ್ ಜಾನ್ ಪ್ಯಾಸ್ಕಲ್ ಪೋಸ್ಟ್ ವಿರುದ್ಧ  ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪೋಸ್ಟ್ ಮತ್ತಿತರ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಮಾಡಲಾಗಿದೆ.

Ads on article

Advertise in articles 1

advertising articles 2

Advertise under the article