ಮಂತ್ರಾಲಯ: ರಾಯರ ಪವಾಡದಿಂದಲೇ ಮದುವೆಯಾಯ್ತು: ಸುಹಾನಾ ಸಯ್ಯದ್ ಹೇಳಿಕೆ..!!!

ಮಂತ್ರಾಲಯ: ರಾಯರ ಪವಾಡದಿಂದಲೇ ಮದುವೆಯಾಯ್ತು: ಸುಹಾನಾ ಸಯ್ಯದ್ ಹೇಳಿಕೆ..!!!

ಮಂತ್ರಾಲಯ :ಶ್ರೀ ರಾಘವೇಂದ್ರ ಸ್ವಾಮಿಗಳಿಂದಲೇ ನನಗೆ ಮದುವೆ ಆಗಿದೆ ಎಂದು ಸುಹಾನಾ ಸೈಯದ್‌ ಅವರು ಹೇಳಿಕೊಂಡಿದ್ದಾರೆ. ಪತಿಯ ಜೊತೆಗೆ ಮಂತ್ರಾಲಯಕ್ಕೆ ಭೇಟಿ ಕೊಟ್ಟಿರುವ ಅವರು ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರತಿ ಬಾರಿ ನಾನು ಮಂತ್ರಾಲಯಕ್ಕೆ ಬಂದಾಗ, ನಮ್ಮಿಬ್ಬರ ಕುಟುಂಬಗಳ ಆಶೀರ್ವಾದದೊಂದಿಗೆ ನಮ್ಮ ಮದುವೆ ನಡೆಯಬೇಕು ಎಂದು ಪ್ರಾರ್ಥಿಸುತ್ತಿದ್ದೆ. ಈ ಒಂದು ಪವಾಡ ಆಗಲಿ ಎಂದು ಬೇಡುತ್ತಿದ್ದೆ ಎಂದು ಸುಹಾನಾ ಸೈಯದ್‌ ಅವರು ಬರೆದುಕೊಂಡಿದ್ದಾರೆ..

ಒಂದು ದಿನ ನಾನು ನಿತಿನ್‌ ಶಿವಾಂಶ್‌ ಜೊತೆಗೆ ಇಲ್ಲಿಗೆ ಬರುತ್ತೇನೆ ಎಂಬ ಭರವಸೆಯೊಂದಿಗೆ ಕಣ್ಣೀರು ಹಾಕಿಕೊಂಡು ಹೊರಡುತ್ತಿದ್ದೆ. ಮದುವೆಯಾದೆವು, ಆಶೀರ್ವಾದ ಸಿಕ್ಕಿತು, ಜೊತೆಯಾಗಿದ್ದೇವೆ. ಇಂದು… ನಾವಿಲ್ಲಿ ಇದ್ದೇವೆ. ಈ ಪ್ರಾರ್ಥನೆಗೆ ಉತ್ತರ ದೊರೆತಿದ್ದಕ್ಕೆ ಪದಗಳಲ್ಲಿ ಹೇಳಲಾಗದಷ್ಟು ಕೃತಜ್ಞಳಾಗಿದ್ದೇನೆ ಎಂದು ಸುಹಾನಾ ಹೇಳಿದ್ದಾರೆ.

ಸರಿಗಮಪ ಶೋ ಖ್ಯಾತಿಯ ಸುಹಾನಾ ಸೈಯದ್‌ ಅವರು ನಿತಿನ್‌ ಶಿವಾಂಶ್‌ ಎನ್ನುವವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಧರ್ಮ ಬೇರೆ ಬೇರೆ. ಹೀಗಾಗಿ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಆಗಿರಲಿಲ್ಲ.

Ads on article

Advertise in articles 1

advertising articles 2

Advertise under the article