ಬೆಂಗಳೂರು :ಪುತ್ರನಿಗೆ ವಿಷ ಕುಡಿಸಿ ಕೊಂದು ತಾಯಿ, ಅಜ್ಜಿ ಆತ್ಮ*ಹತ್ಯೆ..!!
Monday, December 8, 2025

ಬೆಂಗಳೂರು : ಪುತ್ರನಿಗೆ ವಿಷ ಕುಡಿಸಿ ಕೊಂದು ತಾಯಿ ಮತ್ತು ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಬೆಂಗಳೂರಿನ ಎಸ್ ಜಿ ಪಾಳ್ಯದಲ್ಲಿ ನಡೆದಿದೆ.
14 ವರ್ಷದ ಬಾಲಕ ಮೌನೀಶ್ ನನ್ನ ಕೊಂದು ತಾಯಿ ಸುಧಾ ಹಾಗೂ ಅಜ್ಜಿ ಮುದ್ದಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.