ಬೆಂಗಳೂರು :ಮಿತಿಮೀರಿ ಮಾತಾಡಿದ ಗಿಲ್ಲಿಗೆ ಈ ವಾರದ ಕಳಪೆ ಪಟ್ಟ; ಎಡವಿದ್ದು ಎಲ್ಲಿ?

ಬೆಂಗಳೂರು :ಮಿತಿಮೀರಿ ಮಾತಾಡಿದ ಗಿಲ್ಲಿಗೆ ಈ ವಾರದ ಕಳಪೆ ಪಟ್ಟ; ಎಡವಿದ್ದು ಎಲ್ಲಿ?

ಬೆಂಗಳೂರು :ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯ ಕಾಮಿಡಿಗೆ ಫಿದಾ ಆಗದವರು ಯಾರು ಇಲ್ಲ ಎನ್ನಬಹುದು. ಆದರೆ ಇತ್ತೀಚೆಗೆ ಅವರ ಹಾಸ್ಯ ಅತಿರೇಕವೆನಿಸಿದೆ. ಆ ಕಾರಣದಿಂದಲೇ ಇದೀಗ ಗಿಲ್ಲಿಗೆ ಕಳಪೆ ಪಟ್ಟ ಸಿಗುವಂತಾಗಿದೆ.

ಹೌದು, ಬಿಗ್‌ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈಗ 68 ದಿನಗಳು ಕಳೆದಿವೆ. ಮೊದಲ ವಾರದಿಂದಲೂ ಎಲ್ಲರನ್ನೂ ನಗಿಸುತ್ತಾ ಬಂದಿರುವ ಗಿಲ್ಲಿ ನಟ ಎರಡನೇ ಬಾರಿಗೆ ಕಳಪೆ ಪಟ್ಟ ಪಡೆದಿದ್ದಾರೆ. ಈ ವಾರ ಬಿಗ್‌ಬಾಸ್ ಮನೆಯಲ್ಲಿ ಅನೆಕರು ಕಳಪೆ ಪಟ್ಟಕ್ಕೆ ಗಿಲ್ಲಿ ಹೆಸರನ್ನು ಸೂಚಿಸಿದ್ದಾರೆ. ಅತಿರೇಕದ ಮಾತು, ಹಾಸ್ಯದ ಹೆಸರಿನಲ್ಲಿ ಗಿಲ್ಲಿ ನಟ ಅನೇಕರನ್ನು ಅಪಹಾಸ್ಯ ಮಾಡುತ್ತಾರೆ. ಆ ಕಾರಣದಿಂದಲೇ ರಘು, ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ಮುಂತಾದವರು ಗಿಲ್ಲಿಗೆ ಕಳಪೆ ಪಟ್ಟ ನೀಡಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಎಲ್ಲರ ಜತೆಗೂ ಮಾತಾಡುತ್ತಾ ಸದಾ ಲವಲವಿಕೆಯಿಂದ ಇರುತ್ತಾರೆ. ಇವರ ಹಾಸ್ಯಕ್ಕೆ ಮನೆ ಮಂದಿ ಎಲ್ಲರೂ ಎಂಜಾಯ್ ಮಾಡುತ್ತಾರೆ. ಆದರೆ ಇವರು ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಕಾಮಿಡಿ ಮಾಡಿದ್ದನ್ನು ಅನೇಕರು ವಿರೋಧಿಸಿದ್ದಾರೆ.

ಈ ಮೊದಲು ರಘು ಗಿಲ್ಲಿ ನಡುವೆ ಒಳ್ಳೆಯ ಸ್ನೇಹ ಬೆಳೆದಿತ್ತು. ಆದರೆ ಇತ್ತೀಚೆಗೆ ವಾತಾವರಣ ಬದಲಾಗಿದೆ. ರಘು ಗೆ ಗಿಲ್ಲಿ ಮೇಲೆ ಅಸಮಾಧಾನ ಇದೆ. ಸಹ ಸ್ಪರ್ಧಿಗಳ ಜತೆ ಅಪಹಾಸ್ಯ ಮಾಡಿದ್ದನ್ನು ರಘು ತೀವ್ರವಾಗಿ ಖಂಡಿಸಿದ್ದಾರೆ. ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಅದನ್ನೂ ಯಾರೂ ಮೀರಬಾರದು ಎಂದು ರಘು ಕಿವಿಮಾತು ಹೇಳುತ್ತಿದ್ದರೂ, ಗಿಲ್ಲಿ ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
ಈ ಮೊದಲು ರಘು ಅವರು ಗಿಲ್ಲಿ ಜೊತೆ ಹೆಚ್ಚು ಬೆರೆಯುತ್ತಿದ್ದರು. ಆಗ ಅವರಿಬ್ಬರ ನಡುವೆ ಒಳ್ಳೆಯ ಸ್ನೇಹ ಇತ್ತು. ಆದರೆ ದಿನದಿಂದ ದಿನಕ್ಕೆ ರಘು ಅವರಿಗೆ ಗಿಲ್ಲಿ ಮೇಲಿನ ಭಾವನೆ ಬದಲಾಗುತ್ತಾ ಹೋಯಿತು. ಸಹ ಸ್ಪರ್ಧಿಗಳ ಬಗ್ಗೆ ಗಿಲ್ಲಿ ಅಪಹಾಸ್ಯ ಮಾಡಿದ್ದನ್ನು ರಘು ಅವರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಅದನ್ನು ಯಾರೂ ಮೀರಬಾರದು ಎಂದು ರಘು ಹೇಳುತ್ತಿದ್ದಾರೆ. ಆದರೆ ಅದನ್ನು ಗಿಲ್ಲಿ ಅರ್ಥ ಮಾಡಿಕೊಳ್ಳುತ್ತಿಲ್ಲ.
ಕೆಲವು ಸ್ಪರ್ಧಿಗಳ ವಯಸ್ಸಿನ ಬಗ್ಗೆಯೂ ಗಿಲ್ಲಿ ಅವರು ಅಪಹಾಸ್ಯ ಮಾಡಿದ್ದಾರೆ. ಸೀನಿಯರ್ ಸಿಟಿಜನ್, ವಯಸ್ಸಾದವರು, ವೃದ್ಧರು ಎಂದೆಲ್ಲ ಪದ ಬಳಕೆ ಮಾಡಿದ್ದಾರೆ. ಇದು ಕೂಡ ಹಲವರ ಕೋಪಕ್ಕೆ ಕಾರಣ ಆಗಿದೆ. ಈ ವಿಚಾರದಲ್ಲಿ ಚೈತ್ರಾ ಕುಂದಾಪುರ ಅವರು ಗಿಲ್ಲಿಯನ್ನು ಬಲವಾಗಿ ಖಂಡಿಸಿದ್ದಾರೆ. ಆದರೂ ಕೂಡ ಗಿಲ್ಲಿ ಅವರು ತಮ್ಮದೇ ಸರಿ ಎಂದು ವಾದ ಮಾಡಿದ್ದಾರೆ.

ಈ ವಾರ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಚೈತ್ರಾ ಕುಂದಾಪುರ ಎಲ್ಲರ ಜತೆ ಉತ್ತಮವಾಗಿ ಬೆರೆತಿದ್ದಾರೆ. ಕೊಟ್ಟ ಟಾಸ್ಕ್‌ಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.


Ads on article

Advertise in articles 1

advertising articles 2

Advertise under the article