ಕೋಲಾರ :ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ ಆತ್ಮಹತ್ಯೆ. ನಿಖರ ಕಾರಣ ತಿಳಿದಿಲ್ಲ..!!

ಕೋಲಾರ :ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ ಆತ್ಮಹತ್ಯೆ. ನಿಖರ ಕಾರಣ ತಿಳಿದಿಲ್ಲ..!!

ಕೋಲಾರ:ಕೇವಲ ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ನಡೆದಿದೆ.

ಅಸ್ಸಾಂ ಮೂಲದ ಫರಿಜಾ(22), ರೆಹಮಾನ್(28) ಆತ್ಮಹತ್ಯೆಗೆ ಶರಣಾದ ದಂಪತಿ ಎಂದು ತಿಳಿದು ಬಂದಿದೆ.
ಮೃತ ದಂಪತಿ 15 ದಿನಗಳಿಂದಷ್ಟೇ ಶ್ರೀನಿವಾಸರೆಡ್ಡಿ ಎಂಬುವರ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿಕೊಂಡಿತ್ತು. ಏಳು ದಿನಗಳ ಹಿಂದಷ್ಟೇ ರೆಹಮಾನ್, ಫರಿಜಾ ದಂಪತಿಗೆ ಹೆಣ್ಣು ಹುಟ್ಟಿತ್ತು. ಆದ್ರೆ, ಇದೀಗ ಚಿಕ್ಕ ಹಸುಳೆಯನ್ನು ಬಿಟ್ಟು ದಂಪತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದೆ. ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ರಾಯಲ್ಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಫರಿಜಾ ಹಾಗೂ ರೆಹಮಾನ್ ವಿಷ ಸೇವಿಸಿ ಮನೆಯಲ್ಲಿ ಅಕ್ಕಪಕ್ಕದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೃತಪಟ್ಟ ತಂದೆ ತಾಯಿಯ ಮಧ್ಯೆ ಏನು ಅರಿಯದ ಮಗು ಅಳುತ್ತಿದ್ದು, ಈ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.
ತಾಯಿಯ ಹೊಟ್ಟೆಯಿಂದ ಹೊರಬಂದು ಏಳು ದಿನವಾಗಿರುವ ಪುಟ್ಟ ಕಂದಮ್ಮ ಈಗ ತಾನೆ ಕಣ್ಣು ಬಿಟ್ಟು ನೋಡಲು ಪ್ರಾರಂಭಿಸಿದೆ. ಆದ್ರೆ, ಇದೀಗ ಪುಟ್ಟ ಮಗುವಿಗೆ ಹಾರೈಕೆ ಮಾಡುವವರೇ ಇಲ್ಲದಂತಾಗಿದ್ದು, ಚಿಕ್ಕಂದಿನಲ್ಲೇ ಕಣ್ಣು ಬಿಟ್ಟು ನೋಡುವಷ್ಟರಲ್ಲೇ ಮಗು ತನ್ನ ತಂದೆ ತಾಯಿಯನ್ನ ಕಳೆದುಕೊಂಡು ಅನಾಥವಾಗಿದೆ.

Ads on article

Advertise in articles 1

advertising articles 2

Advertise under the article