ಬೆಂಗಳೂರು :ಫ್ಲಾಟ್‌ನಲ್ಲಿ ರಾತ್ರಿ ಉಳಿಯಲು ಇಬ್ಬರು ಯುವತಿಯರಿಗೆ ಅವಕಾಶ ಕೊಟ್ಟ ವ್ಯಕ್ತಿಗೆ 5000 ರೂ. ದಂಡ!!!

ಬೆಂಗಳೂರು :ಫ್ಲಾಟ್‌ನಲ್ಲಿ ರಾತ್ರಿ ಉಳಿಯಲು ಇಬ್ಬರು ಯುವತಿಯರಿಗೆ ಅವಕಾಶ ಕೊಟ್ಟ ವ್ಯಕ್ತಿಗೆ 5000 ರೂ. ದಂಡ!!!

ಬೆಂಗಳೂರು: ವ್ಯಕ್ತಿಯೊಬ್ಬರು ತಮ್ಮ ಫ್ಲಾಟ್‌ನಲ್ಲಿ ಇಬ್ಬರೂ ಯುವತಿಯರಿಗೆ ರಾತ್ರಿ ಉಳಿಯಲು ಅವಕಾಶ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಈ ವ್ಯಕ್ತಿ ಹಾಗೂ ಫ್ಲಾಟ್‌ಮೇಟ್‌ಗೆ ಹೌಸಿಂಗ್ ಸೊಸೈಟಿ 5,000 ರೂ ದಂಡ ವಿಧಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

r/bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಬೆಂಗಳೂರಿನ ವ್ಯಕ್ತಿ ಹೌಸಿಂಗ್ ಸೊಸೈಟಿ ಸಂಗ್ರಹಿಸಿದ ಬಿಲ್‌ನ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದಾರೆ. ಜತೆಗೆ ಈ ಪೋಸ್ಟ್‌ನಲ್ಲಿ ಮೂಲತಃ ನಮ್ಮ ಸೊಸೈಟಿಯಲ್ಲಿ ಬ್ಯಾಚುಲರ್‌ಗಳು ರಾತ್ರಿಯಿಡೀ ಅತಿಥಿಗಳನ್ನು ಸ್ವೀಕರಿಸಬಾರದು ಎಂಬ ನಿಯಮವಿದೆ. ಆದರೆ ಕುಟುಂಬಕ್ಕೆ ಯಾವುದೇ ನಿರ್ಬಂಧವಿಲ್ಲ. ನಾವು ಕೂಡ ಎಲ್ಲಾ ಮೊತ್ತವನ್ನು ಪಾವತಿಸುತ್ತೇವೆ. ಇದು ಮೊದಲ ನಿಯಮ ಉಲ್ಲಂಘನೆಯಂತಿದೆ. ಆದರೆ ನನಗೆ ಈ ಬಗ್ಗೆ ಸಣ್ಣ ಎಚ್ಚರಿಕೆ ಕೂಡ ಸಿಗಲಿಲ್ಲ. ಇದು ತುಂಬಾ ಸಣ್ಣ ಸಮಸ್ಯೆ ಎಂದು ನನಗೆ ತಿಳಿದಿದೆ, ಆದರೆ ಕೀಳಾಗಿ ನಡೆಸಿಕೊಳ್ಳುವುದು ಒಳ್ಳೆಯದಲ್ಲ. ನಾನು ಯಾವುದೇ ದೊಡ್ಡ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೂ, ಅವರು ಇದನ್ನು ಮರುಪರಿಶೀಲಿಸುವಂತೆ ಏನನ್ನಾದರೂ ಮಾಡಬಹುದೇ ಎಂದು ಕೇಳಿದ್ದಾರೆ.

ಹೌದು, ತನ್ನ ಫ್ಲಾಟ್‌ನಲ್ಲಿ ಒಂದು ಹೆಣ್ಣು ರಾತ್ರಿ ಇದ್ದಳು ಎನ್ನುವ ಕಾರಣಕ್ಕಾಗಿ ಅವರಿಗೆ ₹5,000 ದಂಡ ಹಾಕಲಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ತಾವು ಇರುವ ಸೊಸೈಟಿಯಿಂದ ಇನ್‌ವಾಯ್ಸ್‌ನ ಸ್ಕ್ರೀನ್‌ಶಾಟ್ ಅನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆ ಸೊಸೈಟಿ ವಿರುದ್ಧ ಏನಾದರೂ ಕಾನೂನು ಕ್ರಮ ಕೈಗೊಳ್ಳಬಹುದಾ ಎಂದು ಪ್ರಶ್ನಿಸಿದ್ದಾರೆ.

ನಾವಿರುವ ಕಮ್ಯುನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಬ್ಯಾಚುಲರ್‌ಗಳು ಅತಿಥಿಗಳನ್ನು ರಾತ್ರಿ ಉಳಿಸಿಕೊಳ್ಳಲು ಅವಕಾಶವೇ ಇಲ್ಲ. ಆದರೆ ಇತರ ಕುಟುಂಬಗಳಿಗೆ ಮಾತ್ರ ಈ ರೀತಿ ಯಾವುದೇ ನಿರ್ಬಂಧಗಳಿಲ್ಲ. ನಾವು ನಿರ್ವಹಣಾ ಶುಲ್ಕ,ಎಲ್ಲವನ್ನೂ ಕೊಡ್ತೀವಿ, ನಮಗೊಂದು ನ್ಯಾಯ, ಕುಟುಂಬಸ್ಥರಿಗೊಂದು ನ್ಯಾಯ” ಎಂದು ಹೇಳಿದ್ದಾರೆ.

ನವೆಂಬರ್ 1 ರ ದಿನಾಂಕ ಇನ್‌ವಾಯ್ಸ್‌ ನೀಡಲಾಗಿದೆ. ತಮ್ಮ ಫ್ಲಾಟ್‌ನಲ್ಲಿ ಇಬ್ಬರು ಹುಡುಗಿಯರು ರಾತ್ರಿ ಇದ್ದರು ಎಂದು ಸೊಸೈಟಿಯು ಅವರಿಗೂ, ಅವರ ಫ್ಲಾಟ್‌ಮೇಟ್‌ಗೂ ₹5,000 ದಂಡವನ್ನು ಹಾಕಿದೆ. ಅಷ್ಟೇ ಅಲ್ಲದೆ ಅವರು ಈ ಉಲ್ಲಂಘನೆ ನಡೆದ ದಿನಾಂಕ, ರಾತ್ರಿ ಇದ್ದ ಹುಡುಗಿಯರ ಸಂಖ್ಯೆಯನ್ನು ಕೂಡ ಮೆನ್ಶನ್‌ ಮಾಡಿದ್ದಾರೆ. ಇನ್‌ವಾಯ್ಸ್‌ನಲ್ಲಿ ಇಬ್ಬರು ಹುಡುಗಿಯರು ರಾತ್ರಿ ಇದ್ದರು ಎಂದು ಬರೆಯಲಾಗಿದೆ. ಅಕ್ಟೋಬರ್ 31 ರಂದು ಈ ಘಟನೆ ಸಂಭವಿಸಿದೆಯಂತೆ.
ಕಾನೂನು ಕ್ರಮ ಕೈಗೊಳ್ಳಬೇಕು
“ನನಗೆ ಯಾವುದೇ ಎಚ್ಚರಿಕೆ ಕೊಡದಿರೋದು ಮೊದಲ ಉಲ್ಲಂಘನೆಯಾಗಿದೆ. ಇದು ಬಹಳ ಸಣ್ಣ ವಿಷಯ ಅಂತ ನನಗೆ ಗೊತ್ತು, ಆದರೆ ಈ ರೀತಿ ಕೀಳಾಗಿ ನಡೆಸಿಕೊಳ್ಳುವುದು ಸರಿ ಅನಿಸೋದಿಲ್ಲ. ಇದಕ್ಕೆ ನಾನು ದೊಡ್ಡದಾಗಿ ಕಾನೂನು ಕ್ರಮ ಕೈಗೊಳ್ಳದೆ ಇರೋಕಾಗಲ್ಲ. ಆದರೆ ಈ ವಿಷಯವನ್ನು ಮರುಪರಿಶೀಲಿಸುವಂತೆ ಮಾಡಬಹುದೇ” ಎಂದು ಪ್ರಶ್ನಿಸಿದ್ದಾರೆ.


Ads on article

Advertise in articles 1

advertising articles 2

Advertise under the article